ಮಂಗಳವಾರ, ಮಾರ್ಚ್ 2, 2021
19 °C

ವಿದ್ಯುತ್ ಶಾರ್ಟ್ ಸರ್ಕಿಟ್, ಉಪ ನೋಂದಣಿ ಕಚೇರಿಗೆ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ: ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದಾಗಿ ಇಲ್ಲಿನ ಉಪ ನೋಂದಣಿ ಇಲಾಖೆಯ ಕಚೇರಿಗೆ ಮಂಗಳವಾರ ರಾತ್ರಿ ಬೆಂಕಿ ಬಿದ್ದಿದೆ. ಪರಿಣಾಮ‌ ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ ಕೆಲವು ಜೆರಾಕ್ಸ್ ದಾಖಲೆಗಳು ಸುಟ್ಟು ಕರಕಲಾಗಿವೆ,

ಸುದ್ದಿ ತಿಳಿಯುತ್ತಿದ್ದಂತೆಯೇ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮಹೇಶ್ ಮತ್ತು ಪತ್ರ ಬರಹಗಾರ ಎಚ್.ಎಂ.ಶ್ರೀಧರ್ ಕಚೇರಿಯ ಬಾಗಿಲಿನ ಬೀಗ ತೆಗೆದು ಕಿಟಕಿಗಳನ್ನು‌ ತೆತೆದು ಕಚೇರಿಯ ಬೀರುವಿನಲ್ಲಿದ್ದ ಅತೀ ಮುಖ್ಯವಾದ ದಾಖಲೆಗಳನ್ನು ಪ್ರತ್ಯೇಕಿಸಿದರು. ಕೂಡಲೇ ವಿದ್ಯುತ್ ಮೇನ್ ಸ್ವಿಚ್ ಆಫ್ ಮಾಡಿದರು. 

ಆಗ ಸ್ಥಳಕ್ಕೆ ಬಂದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಸಮಯಕ್ಕೆ ಸರಿಯಾಗಿ ಕಚೇರಿ ಪ್ರವೇಶಿಸಿದ್ದರಿಂದ ಸರ್ಕಾರಿ ಮುಖ್ಯ ದಾಖಲೆಗಳು ಸುರಕ್ಷಿತವಾಗಿದೆ ಕಚೇರಿಯ ಮಹೇಶ್ ತಿಳಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು