ಬುಧವಾರ, ಜನವರಿ 27, 2021
21 °C

ಹೊಸಪೇಟೆ: ಸೈಕ್ಲೋಥಾನ್- 2021ಕ್ಕೆ ಸಚಿವ ಆನಂದ್ ಸಿಂಗ್ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ನವೋಲ್ಲಾಸದ ಜೀವನ ನಮ್ಮೆಲ್ಲರದ್ದಾಗಬೇಕು ಮತ್ತು ಹೊಸ ವರ್ಷ ಎಲ್ಲರಿಗೂ ಶುಭ ತರಬೇಕು ಎಂದು ಹಾರೈಸಿ ಭಾನುವಾರ ಬೆಳಿಗ್ಗೆ ನಗರದಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್ ಸೈಕ್ಲೋಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.‌

ಜೈನ್ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನ್ಯೂ ಲೈಫ್ ನ್ಯೂ ಡಿಸ್ಟ್ರಿಕ್ ಸೆಲೆಬ್ರೆಷನ್ ಹೆಸರಲ್ಲಿ ನಡೆದ ಸೈಕ್ಲೋಥಾನ್ ಕಾರ್ಯಕ್ರಮವನ್ನು ಸಚಿವ ಆನಂದ್ ಸಿಂಗ್ ಸೈಕಲ್ ತುಳಿದು ಚಾಲನೆ ನೀಡಿದರು.

ಸ್ವತಃ ಸಚಿವರು ಬೈಸಿಕಲ್ ತುಳಿದು ನಗರ ಸುತ್ತಿದರು. ಮುಂದಿನ ಸಾಲಿನಲ್ಲಿ ಅವರಿದ್ದರೆ ಅನೇಕರು ಅವರ ಹಿಂದೆ ಸೈಕಲ್ ತುಳಿದರು. ಬೈಸಿಕಲ್ ಓಡಿಸುವುದರಿಂದ ಆರೋಗ್ಯ ಉತ್ತಮವಾಗುತ್ತದೆ. ಪ್ರತಿಯೊಬ್ಬರು ಯೋಗ ಮತ್ತು ವ್ಯಾಯಾಮದ ಜತೆಗೆ ಕೆಲಕಾಲ ಬೈಸಿಕಲ್ ಓಡಿಸಬೇಕು ಎಂದು ತಿಳಿಸಿದರು.

ಇಂದರ್ ಕುಮಾರ ಜೈನ್, ಹಿತೇಶ್ ಬಾಗರೇಚ್, ಮಹೇಂದ್ರ ಜೈನ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು