ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಸಮೀಪದ ಬಿಳಿಕಲ್ ಸಂರಕ್ಷಿತ ಅರಣ್ಯದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ನಾಲ್ವರಷ್ಟೇ ಕಾಯಂ ನೌಕರರಿದ್ದಾರೆ.

ಅದು ಕೂಡ ಅಧಿಕಾರಿ ವರ್ಗ ಎನ್ನುವುದು ವಿಶೇಷ. ಇತ್ತೀಚೆಗೆ ನಿವೃತ್ತರಾದ ಡಿ.ಎಫ್.ಒ. ಪುರುಷೋತ್ತಮ ಅವರ ಜಾಗಕ್ಕೆ ಸೋನಾಲಿ ರುತ್ತಿ ನೇಮಕಗೊಂಡಿದ್ದು, ಇನ್ನಷ್ಟೇ ಅವರು ಅಧಿಕಾರ ಸ್ವೀಕರಿಸಬೇಕು. ಅವರನ್ನು ಹೊರತುಪಡಿಸಿದರೆ ವಲಯ ಅರಣ್ಯ ಅಧಿಕಾರಿ ರಮೇಶ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಂಗಸ್ವಾಮಿ ಹಾಗೂ ಉಪ ವಲಯ ಅರಣ್ಯ ಅಧಿಕಾರಿ ಪರಮೇಶ್ವರಯ್ಯ ಸೇರಿದ್ದಾರೆ.

ವೈದ್ಯ, ಜೀವಶಾಸ್ತ್ರಜ್ಞ, ಎಂಜಿನಿಯರ್, ಕಂಪ್ಯೂಟರ್ ಆಪರೇಟರ್, ವಾಹನ ಚಾಲಕರು, ಸ್ವಚ್ಛತೆ ಕೈಗೊಳ್ಳುವವರು ಸೇರಿದಂತೆ ಒಟ್ಟು 18 ಜನ ಗುತ್ತಿಗೆ ನೌಕರರಿದ್ದಾರೆ. 149.50 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿರುವ ಉದ್ಯಾನಕ್ಕೆ ಇಷ್ಟು ಸಿಬ್ಬಂದಿ ಸಾಕೇ ಎಂಬ ಪ್ರಶ್ನೆ ಎದುರಾಗಿದೆ.

2018ರಲ್ಲಿ ಜಿಂಕೆ ಉದ್ಯಾನ ಆರಂಭಗೊಂಡಾಗ ಇಷ್ಟೇ ಸಂಖ್ಯೆಯಲ್ಲಿ ನೌಕರರಿದ್ದರು. ಹೋದ ಜೂನ್21ರಂದು ಹುಲಿ, ಸಿಂಹ ಸಫಾರಿ ಆರಂಭಗೊಂಡಿದೆ. ಹೀಗಿದ್ದರೂ ಅಷ್ಟೇ ಸಿಬ್ಬಂದಿಯೊಡನೆ ಉದ್ಯಾನ ಮುನ್ನಡೆಸಲಾಗುತ್ತಿದೆ. ಹಂತ ಹಂತವಾಗಿ ಬಳ್ಳಾರಿ ಮೃಗಾಲಯದಿಂದ ಚಿರತೆ, ಮೊಸಳೆ, ಹೈನಾ ಸೇರಿದಂತೆ ಇತರೆ ಪ್ರಾಣಿಗಳನ್ನು ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಎಂಟು ಜನ ಗುತ್ತಿಗೆ ನೌಕರರನ್ನು ಇಲ್ಲಿ ಮುಂದುವರೆಸಲು ತೀರ್ಮಾನಿಸಲಾಗಿದೆ. ಆದರೆ, ಈ ನೌಕರರ ಪೈಕಿ ಬಹುತೇಕರು ಸಫಾರಿ,ಕಾಡುಪ್ರಾಣಿಗಳ ನಿರ್ವಹಣೆ, ಸುರಕ್ಷತೆಯ ವಿಷಯದಲ್ಲಿ ತರಬೇತಿ ಹೊಂದಿದವರಲ್ಲ.

‘ವಾಜಪೇಯಿ ಉದ್ಯಾನ ನೈಸರ್ಗಿಕ ಅರಣ್ಯದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಅನ್ಯ ಭಾಗಗಳ ಕಾಡುಗಳಿಂದ ವನ್ಯಪ್ರಾಣಿಗಳನ್ನು ತಂದು ಇರಿಸಲಾಗಿದೆ. ಸ್ಥಳೀಯ ಅನೇಕ ಸರೀಸೃಪಗಳು ಅಲ್ಲಿವೆ. ಹೆಚ್ಚಿನ ಕಾವಲು ಅಗತ್ಯವಿದೆ. ಅದರಲ್ಲೂ ನುರಿತ ಸಿಬ್ಬಂದಿಯ ಅಗತ್ಯವಿದೆ. ಆದರೆ, ಅವರನ್ನು ನೇಮಕ ಮಾಡಿಕೊಳ್ಳದೆ ಸಫಾರಿ ಆರಂಭಿಸಲಾಗಿದೆ’ ಎನ್ನುತ್ತಾರೆ ಜನಸಂಗ್ರಾಮ ಪರಿಷತ್ತಿನ ಮುಖಂಡ ಶಿವಕುಮಾರ ಮಾಳಗಿ.

‘ಉದ್ಯಾನದಿಂದ ಸ್ವಲ್ಪವೇ ದೂರದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ, ಐಷಾರಾಮಿ ಹೋಟೆಲ್, ಕಮಲಾಪುರ ಪಟ್ಟಣ ಇದೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಅಪಾಯ ತಪ್ಪಿದಲ್ಲ. ಪ್ರಾಣಿಗಳ ರಕ್ಷಣೆ ಜತೆಗೆ ಸ್ಥಳೀಯರಿಗೂ ಸುರಕ್ಷತೆಯ ಖಾತ್ರಿ ಆಗಬೇಕು. ಕಾಯಂ ಅಲ್ಲದಿದ್ದರೂ ಗುತ್ತಿಗೆ ಆಧಾರಿತ ನೌಕರರನ್ನು ಸೇರಿಸಿಕೊಂಡರೂ ಅವರು ಆ ವಿಷಯದಲ್ಲಿ ನುರಿತವರು ಆಗಿರಬೇಕು. ಅಂತಹವರ ನೇಮಕಕ್ಕೆ ಆದ್ಯತೆ ಸಿಗಬೇಕು. ಉದ್ಯಾನ ಆರಂಭದಿಂದ ಸ್ಥಳೀಯರಿಗೆ ಉದ್ಯೋಗ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಅದು ಹುಸಿಯಾಗಿದೆ’ ಎಂದು ಹೇಳಿದರು.

ಸಿಬ್ಬಂದಿ ಕೊರತೆಗೆ ಸಂಬಂಧಿಸಿದಂತೆ ಇಲಾಖೆಯ ಅಧಿಕಾರಿಯನ್ನು ಪ್ರಶ್ನಿಸಿದಾಗ, ‘ಈ ಕುರಿತು ನಾನೇನೂ ಪ್ರತಿಕ್ರಿಯಿಸಲಾರೆ. ಇಷ್ಟರಲ್ಲೇ ಡಿ.ಎಫ್.ಒ.ಅಧಿಕಾರ ಸ್ವೀಕರಿಸಲಿದ್ದು, ಅವರು ಮಾಹಿತಿ ನೀಡುವರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.