ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾಪುರ ಪಟ್ಟಣ ಪಂಚಾಯತಿ: ₹47.92 ಕೋಟಿ ಬಜೆಟ್ ಮಂಡನೆ

Last Updated 2 ಮಾರ್ಚ್ 2021, 15:58 IST
ಅಕ್ಷರ ಗಾತ್ರ

ವಿಜಯನಗರ (ಹೊಸಪೇಟೆ): ತಾಲ್ಲೂಕಿನ ಕಮಲಾಪುರ ಪಟ್ಟಣ ಪಂಚಾಯತಿಯಲ್ಲಿ 2021-22ನೇ ಸಾಲಿಗೆ ಒಟ್ಟು ₹47.92 ಕೋಟಿ ಆಯವ್ಯಯ ಮಂಡಿಸಿದೆ.

ಪಟ್ಟಣ ಪಂಚಾಯತಿಯ ಕಚೇರಿಯಲ್ಲಿ ಮಂಗಳವಾರ ಸಂಜೆ ನಡೆದ ಆಯ-ವ್ಯಯ ಸಭೆಯಲ್ಲಿ ಪ್ರಸಕ್ತ ವರ್ಷದ ಬಜೆಟ್‌ ಮಂಡಿಸಲಾಯಿತು.

ಪ್ರಸಕ್ತ ವರ್ಷದಲ್ಲಿ ಎಸ್.ಎಫ್.ಸಿ ಮತ್ತು 15ನೇ ಹಣಕಾಸು ಯೋಜನೆಯಿಂದ ₹6 ಕೋಟಿ ಅನುದಾನದ ನಿರೀಕ್ಷೆಯಿದೆ. ಪಟ್ಟಣದಲ್ಲಿ ಸಾಮೂಹಿಕ ಶೌಚಾಲಯ ನಿರ್ವಹಣೆ, ಘನತ್ಯಾಜ್ಯ ವಸ್ತು, ಆಂತರಿಕ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿ, ನಗರೋತ್ಥಾನ ಮುನ್ಸಿಪಾಲಿಟಿ-3ರ ಯೋಜನೆಯಲ್ಲಿ ಮಂಜೂರಾದ ₹2 ಕೋಟಿ ಹಾಗೂ ಜಿಲ್ಲಾ ಖನಿಜ ನಿಧಿಯಿಂದ ₹14 ಕೋಟಿ ಅನುದಾನದ ನಿರೀಕ್ಷೆಗಳಿವೆ.

ಪಟ್ಟಣದಲ್ಲಿ ಬಸ್ ನಿಲ್ದಾಣಗಳ ನವೀಕರಣ, ಪಂಚಾಯಿತಿ ಕಚೇರಿ ನಿರ್ವಹಣೆ ಹಾಗೂ ಮಳಿಗೆಗಳನ್ನು ನಿರ್ವಹಿಸುವ ಕಾಮಗಾರಿಗಳ ಚಾಲನೆ, ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದ ಬದಲು ವಿಲೇವಾರಿ ಉದ್ಯಾನಕ್ಕಾಗಿ ಯೋಜನೆ ರೂಪಿಸುವ ಚಿಂತನೆ ಹೊಂದಲಾಗಿದೆ.

ಹೊಸದಾಗಿ ನಿರ್ಮಾಣಗೊಂಡ 30 ಶೌಚಾಲಯಗಳ ನಿರ್ವಹಣೆಗಾಗಿ ಟೆಂಡರ್ ಕರೆಯುವುದು. ರಾಜೀವ್ ಗಾಂಧಿ ಗ್ರಾಮೀಣ ವಸತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ವಿತರಿಸಲು ಸರ್ಕಾರದ ವತಿಯಿಂದ ಮಂಜೂರಾತಿ ಪಡೆಯುವುದು ಈ ಸಾಲಿನ ಬಜೆಟ್ ನ ಪ್ರಮುಖ ಅಂಶಗಳಾಗಿವೆ.

ಸಭೆಯಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ನಾಗೇಶ್, ಅಧ್ಯಕ್ಷ ಸೈಯದ್ ಅಮಾನುಲ್ಲಾ, ಉಪಾಧ್ಯಕ್ಷೆ ಬೋರಮ್ಮ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಕಿಶೋರ್ ಕುಮಾರ್ ಸೇರಿದಂತೆ ಪಟ್ಟಣ ಪಂಚಾಯಿತಿಯ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT