’ವಚನ ಸಾಹಿತ್ಯ ಸಂರಕ್ಷಿಸಿದ್ದು ಮಾಚಿದೇವ’

7

’ವಚನ ಸಾಹಿತ್ಯ ಸಂರಕ್ಷಿಸಿದ್ದು ಮಾಚಿದೇವ’

Published:
Updated:
Prajavani

ಹೊಸಪೇಟೆ: ವೀರ ಗಣಾಚಾರಿ ಮಡಿವಾಳ ಮಾಚಿದೇವ ಅವರ ಜಯಂತಿಯನ್ನು ಶುಕ್ರವಾರ ನಗರದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ನಗರದ ಸಣ್ಣಕ್ಕಿ ವೀರಭದ್ರೇಶ್ವರ ದೇಗುಲದ ಬಳಿ ಅಲಂಕರಿಸಿದ ವಾಹನದಲ್ಲಿ ಇಟ್ಟಿದ್ದ ಮಾಚಿದೇವರ ಭಾವಚಿತ್ರ ಮಡಿವಾಳ ಸಮಾಜದ ಪ್ರಮುಖರು ಪೂಜೆ ಸಲ್ಲಿಸಿದರು. ನಂತರ ಅಲ್ಲಿಂದ ರೋಟರಿ ವೃತ್ತದ ವರೆಗೆ ಮೆರವಣಿಗೆ ನಡೆಯಿತು. 

ತಾಲ್ಲೂಕು ಕಚೇರಿಯಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶಿಕ್ಷಕ ಕೆ. ಬಸವರಾಜ ಮಾತನಾಡಿ, ‘ವಚನ ಸಾಹಿತ್ಯವನ್ನು ಸಂರಕ್ಷಿಸಿದ ಕೀರ್ತಿ ಮಡಿವಾಳ ಮಾಚಿದೇವರಿಗೆ ಸಲ್ಲುತ್ತದೆ. ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ ಶರಣರ ವಧೆ ಮಾಡಲಾಗುತ್ತಿತ್ತು. ವಚನದ ಗರಿಗಳನ್ನು ಹಾಳುಗೆಡವಲಾಗುತ್ತಿತ್ತು.  ಅದನ್ನು ಮನಗಂಡ ಮಾಚಿದೇವರು ಬೆನ್ನಿಗೆ ಕಟ್ಟಿಕೊಂಡು, ಅನೇಕ ಜನ ಶರಣರೊಂದಿಗೆ ಉಳಿವಿಗೆ ಬಂದಿದ್ದರು’ ಎಂದು ಹೇಳಿದರು.

‘ಅಂದು ಮಾಚಿದೇವರು ಈ ಕೆಲಸ ಮಾಡಿರದಿದ್ದರೆ ಇಂದು ನಾವು ವಚನಗಳನ್ನು ಓದಲು ಸಾಧ್ಯವಾಗುತ್ತಿರಲಿಲ್ಲ. ಕಾಯಕ ಮತ್ತು ಭಕ್ತಿಯಲ್ಲಿ ಮಾಚಿದೇವರು ಅಪಾರ ನಿಷ್ಠೆ ಹೊಂದಿದ್ದರು. ಅವರ ವಚನಗಳಲ್ಲಿ ಅಸಮಾನತೆ, ಮೂಢನಂಬಿಕೆ, ಡಾಂಭಿಕತೆ ವಿರುದ್ಧ ತೀಕ್ಷ್ಣವಾಗಿ ಬರೆದಿದ್ದಾರೆ. ಸಮಾಜ ಮಲಿನ ತೊಳೆಯಲು ಶ್ರಮಿಸಿದ್ದಾರೆ’ ಎಂದರು. 

‘ಅಪ್ರತಿಮ ಭಕ್ತಿನಿಷ್ಠೆ, ಧೈರ್ಯದ ವೀರ, ನಿಷ್ಠುರ ವ್ಯಕ್ತಿತ್ವದ ಶ್ರೇಷ್ಠ ಕಾಯಕ ಯೋಗಿ ಮಾಚಿದೇವರಾಗಿದ್ದರು. ಬಸವಣ್ಣನನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ನಡೆದಂತೆ ಬದುಕಿದ್ದ ಅವರ ಜೀವನ ನಮಗೆ ದಾರಿದೀಪವಾಗಿದೆ’ ಎಂದು ತಿಳಿಸಿದರು. 

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ, ಕಾರ್ಯನಿರ್ವಾಹಕ ಅಧಿಕಾರಿ ಟಿ. ವೆಂಕೋಬಪ್ಪ, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ಮಡಿವಾಳ ಸಮಾಜದ ಮುಈಖಂಡರಾದ ಎಂ. ನಾಗಲಿಂಗಪ್ಪ, ಬಿ. ವೆಂಕೋಬಪ್ಪ, ಎ.ಪಂಪಣ್ಣ, ಎ. ಮರಿಯಪ್ಪ, ಎ. ಪರಸಪ್ಪ, ಸಣ್ಣ ಭೀಮಪ್ಪ, ಎ. ಗೋವಿಂದರಾಜು, ಅಂಜಿನಪ್ಪ, ಎಂ. ಶಾಮಪ್ಪ ಆಗೋಲಿ, ಎ. ಕೃಷ್ಣಯ್ಯ, ಎಂ.ಕೆ. ಹನುಮಂತಪ್ಪ, ದ್ಯಾವಣ್ಣ, ರಾಜಕುಮಾರ, ಹೂಲಪ್ಪ ಇದ್ದರು.

ತಾಲ್ಲೂಕು ಆಡಳಿತ, ಮಡಿವಾಳ ಸಮಾಜದ ಸಹಭಾಗಿತ್ವದಲ್ಲಿ ಜಯಂತಿ ಆಯೋಜಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !