ಮುತ್ಕೂರಿನಲ್ಲಿ ಮತದಾನ ಬಹಿಷ್ಕಾರ

ಭಾನುವಾರ, ಮೇ 26, 2019
28 °C
ಗ್ರಾಮ ಪಂಚಾಯಿತಿ ಕಚೇರಿ ಸ್ಥಳಾಂತರ ಹಿನ್ನೆಲೆ

ಮುತ್ಕೂರಿನಲ್ಲಿ ಮತದಾನ ಬಹಿಷ್ಕಾರ

Published:
Updated:
Prajavani

ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮುತ್ಕೂರು ಗ್ರಾಮದ 1,350 ಮತದಾರರು ಮತದಾನದಿಂದ ದೂರ ಉಳಿದರು. ಎರಡು ಮತಗಟ್ಟೆಗಳು ಮತದಾರರಿಲ್ಲದೇ ಬಿಕೋ ಎನ್ನುತ್ತಿದ್ದವು.

ಗ್ರಾಮ ಪಂಚಾಯ್ತಿ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡಿದ್ದನ್ನು ವಿರೋಧಿಸಿ ಈ ಗ್ರಾಮದಲ್ಲಿ ಲೋಕಸಭೆ ಉಪ ಚುನಾವಣೆಯಲ್ಲೂ ಮತದಾನವನ್ನು ಬಹಿಷ್ಕರಿಸಲಾಗಿತ್ತು. 

ತಹಶೀಲ್ದಾರ್ ಸಂತೋಷ್‍ ಕುಮಾರ್, ಮಾದರಿ ನೀತಿ ಸಂಹಿತೆ ಜಾರಿ ಮುಖ್ಯಸ್ಥ ಬಿ.ಮಲ್ಲಾನಾಯ್ಕ, ‘ಗ್ರಾಮಕ್ಕೆ ತೆರಳಿ ಮತದಾನ ಮಾಡುವಂತೆ ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಯಾರೊಬ್ಬರೂ ಮತಗಟ್ಟೆಗೆ ತೆರಳಲಿಲ್ಲ. ತಳವಾರ ಲಕ್ಷ್ಮಣ, ಮಂಜುನಾಥ ರೆಡ್ಡಿ, ಮಾರುತೇಶ್ ಸೇರಿದಂತೆ ಗ್ರಾಮದ ನೂರಾರು ಜನ ದೇವಸ್ಥಾನದ ಬಳಿ ಜಮಾಯಿಸಿದ್ದರು.

ಮೂಲಸೌಕರ್ಯ: ಕುರುಗೋಡು ತಾಲ್ಲೂಕಿನ ಚಿಟಿಗಿನಹಾಳು ಗ್ರಾಮದಲ್ಲಿ ಮೂಲಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಬೆಳಿಗ್ಗೆ 11 ಗಂಟೆವರೆಗೂ ಮತ ಚಲಾಯಿಸಲಿಲ್ಲ. ತಹಶೀಲ್ದಾರ್‌ ಪದ್ಮಾಕುಮಾರ್‌ ಅವರು ಸ್ಥಳಕ್ಕೆ ಬಂದು ಭರವಸೆ ನೀಡಿದ ಬಳಿಕ ಮತ ಚಲಾಯಿಸಿದರು.

ಮತಗಟ್ಟೆಯನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿ ಕೂಡ್ಲಿಗಿ ತಾಲ್ಲೂಕಿನ ಮಡಕಲಕಟ್ಟೆ ಹಲವು ಗ್ರಾಮಸ್ಥರು ಮತದಾನ ಬಹಿಷ್ಕರಿಸಿದರು. ತಹಶೀಲ್ದಾರ್‌ ಮಹಾಬಲೇಶ್ವರ್‌ ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡಿದ ಬಳಿಕ ಮತದಾನ ಆರಂಭವಾಯಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !