ಹೊಸಪೇಟೆ–ಧರ್ಮಸ್ಥಳ ಸ್ಲೀಪರ್‌ ಬಸ್‌ ಆರಂಭ

ಗುರುವಾರ , ಜೂಲೈ 18, 2019
28 °C

ಹೊಸಪೇಟೆ–ಧರ್ಮಸ್ಥಳ ಸ್ಲೀಪರ್‌ ಬಸ್‌ ಆರಂಭ

Published:
Updated:
Prajavani

ಹೊಸಪೇಟೆ: ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗವು ನಗರದಿಂದ ಧರ್ಮಸ್ಥಳಕ್ಕೆ ನೂತನ ಸ್ಲೀಪರ್‌ ಬಸ್‌ ಸೇವೆ ಆರಂಭಿಸಿದೆ.

ಪ್ರತಿದಿನ ರಾತ್ರಿ 9.30ಕ್ಕೆ ನಗರದ ಬಸ್‌ ನಿಲ್ದಾಣದಿಂದ ಹೊರಡುವ ಬಸ್‌, ಮರುದಿನ ಬೆಳಿಗ್ಗೆ 6.45ಕ್ಕೆ ಧರ್ಮಸ್ಥಳ ತಲುಪುವುದು. ಧರ್ಮಸ್ಥಳದಿಂದ ರಾತ್ರಿ 9.30ಕ್ಕೆ ಹೊರಡುವ ಬಸ್‌, ಮರುದಿನ ಬೆಳಿಗ್ಗೆ 6.15ಕ್ಕೆ ನಗರ ಬಂದು ಸೇರುವುದು. ₹783 ಪ್ರಯಾಣ ದರ ನಿಗದಿಪಡಿಸಲಾಗಿದೆ. ಪ್ರಯಾಣಿಕರು ಆನ್‌ಲೈನ್‌ನಲ್ಲಿ ಟಿಕೆಟ್‌ ಕಾಯ್ದಿರಿಸಬಹುದು.

ಸೋಮವಾರ ರಾತ್ರಿ ಬಸ್‌ ಸಂಚಾರಕ್ಕೆ ಚಾಲನೆ ನೀಡಿದ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ, ‘ಶೀಘ್ರದಲ್ಲೇ ನಗರದಿಂದ ಶಿರಡಿಗೆ ಸ್ಲೀಪರ್‌ ಬಸ್‌ ಆರಂಭಿಸಲಾಗುವುದು. ಕೂಡ್ಲಿಗಿ ಹಾಗೂ ಹೂವಿನಹಡಗಲಿಯಿಂದ ಬೆಂಗಳೂರಿಗೆ, ನಗರದಿಂದ ವಿಜಯವಾಡ, ಮಂಗಳೂರಿಗೆ ಹವಾನಿಯಂತ್ರಿತ ಸ್ಲೀಪರ್‌ ಬಸ್‌ ಆರಂಭಿಸಲಾಗುವುದು. ಈ ಕುರಿತು ಈಗಾಗಲೇ ಪ್ರಸ್ತಾವ ಕಳುಹಿಸಲಾಗಿದೆ’ ಎಂದು ಮಾಹಿತಿ ನೀಡಿದರು. 

ವಿಭಾಗೀಯ ಸಂಚಾರ ಅಧಿಕಾರಿ ಕೆ.ಕೆ. ಲಮಾಣಿ, ಉಪ ಮುಖ್ಯ ಭದ್ರತಾ ಜಾಗೃತ ಅಧಿಕಾರಿ ವೀರಭದ್ರಪ್ಪ ಕುಂಬಾರಿ, ಘಟಕ ವ್ಯವಸ್ಥಾಪಕ ಎಸ್‌.ಎಂ. ವಾಲಿಕಾರ, ನಿಲ್ದಾಣದ ಅಧಿಕಾರಿ ಸಿ. ವೆಂಕಟಾಚಾಲಪತಿ, ವಿಭಾಗೀಯ ತಾಂತ್ರಿಕ ಶಿಲ್ಪಿ ಎಸ್‌. ಅಲ್ತಾಫ್‌ ಹುಸೇನ್‌, ಸಹಾಯಕ ಲೆಕ್ಕಾಧಿಕಾರಿ ಎಸ್‌. ಚಿತ್ತವಾಡ್ಗಿಯಪ್ಪ, ಸಹಾಯಕ ಸಂಖ್ಯಾಧಿಕಾರಿ ಜೆ. ಮಂಜುನಾಥ, ಸಂಚಾರ ಇನ್‌ಸ್ಪೆಕ್ಟರ್‌ ನೀಲಪ್ಪ, ಪಾರುಪತ್ತೆಗಾರ ಮರಿಲಿಂಗಪ್ಪ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಜಗನ್ನಾಥ, ಆಡಳಿತ ಅಧಿಕಾರಿ ಸಂಜೀವಮೂರ್ತಿ, ಸಹಾಯಕ ಉಗ್ರಾಣ ಅಧಿಕಾರಿ ಬಿ.ಆರ್‌. ತಳವಾರ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !