ಶನಿವಾರ, ಸೆಪ್ಟೆಂಬರ್ 18, 2021
30 °C
ವಿಶ್ವ ಹಿಂದೂ ಪರಿಷತ್, ಭಜರಂಗದಳ ಮನವಿ

ಗಣೇಶೋತ್ಸವಕ್ಕೆ ಅನುಮತಿ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿರುಗುಪ್ಪ: ಅತಿದೊಡ್ಡ ಹಬ್ಬವಾದ ಗಣೇಶೋತ್ಸವವನ್ನು ಕೋವಿಡ್-19ನ ಮೂರನೇ ಅಲೆಯ ನೆಪವೊಡ್ಡಿ ನಿಷೇದ ಹೇರುವುದು ಸರಿಯಲ್ಲ ಎಂದು ಭಜರಂಗ ದಳದ ತಾಲೂಕು ಸಂಯೋಜಕ ಎಂ.ಆರ್.ಹೇಮನಗೌಡ ಅಸಮಧಾನ ವ್ಯಕ್ತಪಡಿಸಿದರು.

ಗಣೇಶೋತ್ಸವಕ್ಕೆ ಅನುಮತಿ ಕೇಳಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಮುಖ್ಯಮಂತ್ರಿಗೆ ಬರೆದ ಪತ್ರವನ್ನು ಶಿರಸ್ತೇದಾರ್ ಎನ್.ಬಾಬು ಅವರಿಗೆ ಗುರುವಾರ ಸಲ್ಲಿಸಿ ಮಾತನಾಡಿದರು.

ಗಣೇಶೋತ್ಸವ ನಿಷೇಧ ಮಾಡಿ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಂತಾಗಿದ್ದು ಆಚರಣೆಗೆ ಮುಕ್ತ ಅವಕಾಶ ಮಾಡಿಕೊಡಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.

ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಉಪಾಧ್ಯಕ್ಷ ಆನಂದ ಹೆಗಡೆ, ಚನ್ನಬಸವ, ಮನೋಹರ, ಗೋಪಾಲಕೃಷ್ಣ, ಶಿವಕುಮಾರ್, ಶಾಂತಸ್ವಾಮಿ, ಮಂಜುನಾಥಸ್ವಾಮಿ, ಶ್ರೀನಿವಾಸ, ಪಣೀಂದ್ರ ಈ ಸಂದರ್ಭದಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.