ಗುರುವಾರ , ಜುಲೈ 29, 2021
27 °C

ಮೆಣಸಿನಕಾಯಿ ಬೀಜ ಖರೀದಿಗೆ ದಿಢೀರ್ ನೂಕು ನುಗ್ಗಲು- ಪೊಲೀಸರಿಂದ ಲಾಠಿ ಪ್ರಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ನಗರದ ತೋಟಗಾರಿಕೆ ಕಚೇರಿ ಮುಂಭಾಗ ಸೋಮವಾರ ರೈತರು ಮೆಣಸಿಕಾಯಿ ಬೀಜ ಖರೀದಿಗೆ ಬಂದಿದ್ದ ಸಂದರ್ಭದಲ್ಲಿ ಏಕಾಏಕಿ ನೂಕು ನುಗ್ಗಲು ಉಂಟಾಗಿ ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಜಿಲ್ಲಾಡಳಿತ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ಸಿಜೆಂಟಾ ಕಂಪನಿ ವಿತರಕರು 5531 ತಳಿಯ ಮೆಣಸಿನಕಾಯಿ ಬೀಜ ರೈತರಿಗೆ ವಿತರಿಸುತ್ತಿದ್ದಾಗ ಪ್ರಸ್ತುತ ಘಟನೆ ನಡೆದಿದೆ.

ಜಿಲ್ಲೆಯಲ್ಲಿ ಮುಂಗಾರು ಕೃಷಿ ಚಟುವಟಿಕೆ ಆರಂಭವಾಗಿರುವುದರಿಂದ ಮೆಣಸಿಕಾಯಿ ಬೀಜಕ್ಕಾಗಿ ನೂರಾರು ರೈತರು ಬಂದಿದ್ದರು. ಆದರೆ, ಕೆಲವೇ ರೈತರಿಗೆ ಬೀಜ ವಿತರಿಸಿ ಕೌಂಟರ್ ಬಂದ್ ಮಾಡಿದ್ದರಿಂದ ಹಳ್ಳಿ ಭಾಗದಿಂದ ಬಂದ ಇತರೆ ರೈತರು ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ಅರಿತ ಉಪ ವಿಭಾಗಾಧಿಕಾರಿರಮೇಶ್ ಕೋನರೆಡ್ಡಿ, ತಹಶೀಲ್ದಾರ್ ರೆಹಮಾನ್ ಪಾಷ, ಕೃಷಿ ಇಲಾಖೆ ಅಧಿಕಾರಿ ಶರಣಪ್ಪ ಮುದಗಲ್ ಸ್ಥಳಕ್ಕೆ ಭೇಟಿ ನೀಡಿ ರೈತರನ್ನು ಸಮಾಧಾನಪಡಿಸಿದರು.

ಪ್ರತಿ ರೈತರಿಗೆ 100ಗ್ರಾಂ ಮೆಣಸಿನಬೀಜ ವಿತರಿಸಲಾಗುವುದು. ಅದಕ್ಕಾಗಿ ರೈತರು ಪಹಣಿ ಮತ್ತು ಆಧಾರ್ ಕಾರ್ಡ್ ಜಿರಾಕ್ಸ್ ಪ್ರತಿ ಕೊಡಬೇಕು ಎಂದು ಅಧಿಕಾರಿಗಳು ಸೂಚಿಸಿದ್ದರು. ಆದರೆ, ಈ ಮಾಹಿತಿ ನಮಗೆ ತಿಳಿದಿಲ್ಲ ಎಂದು ಕೆಲ ರೈತರು ಹಿಡಿಶಾಪ ಹಾಕಿ ಬೀಜ ದೊರೆಯದೆ ಬರಿಗೈಯಿಂದ ಮನೆಗೆ ಮರಳಿದರು.


ಬಳ್ಳಾರಿ ತೋಟಗಾರಿಕೆ ಕಚೇರಿ ಮುಂದೆ ಸೋಮವಾರ ರೈತರು ಮೆಣಸಿಕಾಯಿ ಬೀಜ ಖರೀದಿಗೆ ಬಂದಿದ್ದ ಸಂದರ್ಭದಲ್ಲಿ ಅಂತರ ಮರೆತಿದ್ದ ರೈತರು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು