ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಮಾ.21ರಂದು ವೀರಶೈವ ವಿದ್ಯಾವರ್ಧಕ ಸಂಘದ ಚುನಾವಣೆ

Last Updated 10 ಫೆಬ್ರುವರಿ 2021, 6:37 IST
ಅಕ್ಷರ ಗಾತ್ರ

ಬಳ್ಳಾರಿ: 'ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ಮಾ. 21ರಂದು ನಗರದ ಆರ್ ಬಿ ವೈಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ' ಎಂದು ಮುಖ್ಯ ಚುನಾವಣಾಧಿಕಾರಿ ಎನ್.ಪಿ.ಲಿಂಗನಗೌಡ ತಿಳಿಸಿದರು.

'ಸಂಘಕ್ಕೆ ಪ್ರತಿ ಮೂರು ವರ್ಷಕ್ಕೆ ಒಮ್ಮೆ ಚುನಾವಣೆ ನಡೆಯುತ್ತದೆ. ಈ‌ ಹಿಂದೆ 2017ರ ಅಕ್ಟೋಬರ್ ನಲ್ಲಿ ಚುನಾವಣೆ ನಡೆದಿತ್ತು. ಕೊರೊನಾ ಕಾರಣದಿಂದಾಗಿ ಈ ಬಾರಿಯ ಚುನಾವಣೆಯನ್ನು ತಡವಾಗಿ ನಡೆಸಲಾಗುತ್ತಿದೆ' ಎಂದು ನಗರದ ಸಂಘದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

'ಸಂಘದಲ್ಲಿ 30 ಸದಸ್ಯರ ಆಯ್ಕೆ ನಡೆಯಲಿದೆ. ಅವರ ಪೈಕಿ 16 ನಗರ ಮತ್ತು 14 ಗ್ರಾಮಾಂತರ ಸದಸ್ಯರಿದ್ದಾರೆ. ಸಂಘದಲ್ಲಿ ಸದ್ಯ 2,586 ಮತದಾರರಿದ್ದಾರೆ. ಅವರ ಪೈಕಿ 214 ಮಹಿಳೆಯರು ಇದ್ದಾರೆ' ಎಂದು ಮಾಹಿತಿ ನೀಡಿದರು.

ನಾಮ ಪತ್ರ ಶುಲ್ಕ 6 ಸಾವಿರ: 'ನಾಮಪತ್ರ ಅರ್ಜಿ ಶುಲ್ಕ ₹ 600 ಹಾಗೂ ಉಮೇದುವಾರಿಕೆ ಶುಲ್ಕ ₹ 6ಸಾವಿರ ನಿಗದಿ ಮಾಡಲಾಗಿದೆ. ಫೆ. 19 ರಿಂದ 26 ರವರೆಗೆ ನಾಮಪತ್ರ ಸ್ವೀಕರಿಸಲಾಗುವುದು. 27 ರಂದು ಪರಿಶೀಲನೆ ನಡೆಯಲಿದೆ. ಮಾರ್ಚ್ 1 ನಾಮಪತ್ರ ಸ್ವೀಕಾರಕ್ಕೆ ಕೊನೆಯ ದಿನ' ಎಂದು ತಿಳಿಸಿದರು.

'ಆರ್ ಬಿವೈ ಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಾ. 21 ರಂದು ಮತದಾನ, 22 ರಂದು ಮತ ಎಣಿಕೆ ನಡೆಯಲಿದೆ. ಅಂದೇ ಫಲಿತಾಂಶ ಪ್ರಕಟಿಸಲಾಗುವುದು' ಎಂದು ಹೇಳಿದರು.

ಸಹಾಯಕ ಚುನಾವಣಾಧಿಕಾರಿಗಳಾದ ವಿ.ಎಂ.ರಾಜಶೇಖರ, ಕೆ.ತೇಜಸ್ ಮೂರ್ತಿ, ಎಸ್.ನಾಗರಾಜ ಮತ್ತು ಎಚ್.ವಿಜಯಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT