ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಶಿವಮೊಗ್ಗ ಜಿಲ್ಲೆ ವಿಭಜನೆ ಹುನ್ನಾರ

ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪ
Last Updated 14 ಮಾರ್ಚ್ 2020, 13:50 IST
ಅಕ್ಷರ ಗಾತ್ರ

ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲೆಯನ್ನು ಮತ್ತೆ ಇಬ್ಭಾಗ ಮಾಡಲು ಹೊರಟಿದ್ದಾರೆ. ಜಿಲ್ಲೆಯ ಪ್ರಮುಖ ಕಚೇರಿಗಳನ್ನು ಶಿಕಾರಿಪುರಕ್ಕೆ ಸ್ಥಳಾಂತರಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣಬೇಳೂರು ಆರೋಪಿಸಿದರು.

ಶಿಕಾರಿಪುರ ಜಿಲ್ಲೆ ಮಾಡುವ ಅವರ ಕನಸು ಮುಂದುವರಿದಿದೆ. ಒಂದು ಜಿಲ್ಲೆಗೆ ಬೇಕಾದ ಎಲ್ಲಾ ಕಚೇರಿಗಳು ಈಗ ಅಲ್ಲಿವೆ. ಇದು ಸ್ವಾರ್ಥದ ಕೆಲಸಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಲಿಂಗನಮಕ್ಕಿ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ವಿದ್ಯುತ್ ಸಮಸ್ಯೆ ನಿವಾರಣೆಯಾಗಿಲ್ಲ. ಸಾಗರ ತಾಲ್ಲೂಕಿನಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಮಂಗನಕಾಯಿಲೆ,ಮತ್ತಿತರವಿಷಯ ಇಟ್ಟುಕೊಂಡು ಬಿಜೆಪಿ ಸರ್ಕಾರದ ವಿರುದ್ಧಕಾಂಗ್ರೆಸ್ ದೊಡ್ಡಮಟ್ಟದ ಹೋರಾಟ ರೂಪಿಸಲಿದೆ ಎಂದರು.

ವಿದ್ಯುತ್ ಸಮಸ್ಯೆಯಿಂದ ರೈತರಿಗೆ ತೊಂದರೆಯಾಗಿದೆ. ಅಧಿಕಾರಿಗಳು ಅಸಹಾಯಕತೆ ತೋರುತ್ತಿದ್ದಾರೆ.ವಿದ್ಯುತ್ ಪರಿವರ್ತಕಗಳುಕೆಟ್ಟು ಹೋಗಿವೆ. ಶಿಕಾರಿಪುರ ಹೊರತುಪಡಿಸಿಇಡೀ ಜಿಲ್ಲೆಯಲ್ಲಿ ವಿದ್ಯುತ್ ಕೊರತೆಇದೆ. ಇದು ಮುಖ್ಯಮಂತ್ರಿಯಮಲತಾಯಿ ಧೋರಣೆಎಂದು ದೂರಿದರು.

ಸಾಗರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಜನಪ್ರತಿನಿಧಿಗಳುಗುತ್ತಿಗೆದಾರರಿಂದ ಕಮಿಷನ್ಪಡೆಯುತ್ತಾರೆ. ಎಲ್ಲಾ ಕಚೇರಿಗಳಲ್ಲೂ ಲಂಚತಾಂಡವಾಡುತ್ತಿದೆ. ಕಾಂಗ್ರೆಸ್ ಭ್ರಷ್ಟಾಚಾರನಡೆಸಿದೆ ಎನ್ನುವ ಬಿಜೆಪಿ ಹಿಂದೆ ರಾಜ್ಯದಲ್ಲಿ ಅಧಿಕಾರ ನಡೆಸಿದಾಗ ಸರ್ಕಾರದ ಎಷ್ಟು ಸಚಿವರುಜೈಲಿಗೆ ಹೋಗಿದ್ದರು ಎನ್ನುದನ್ನು ಮರೆತಿದೆ ಎಂದು ಕುಟುಕಿದರು.

ಹಿಂದೂ ಧರ್ಮಕುರಿತು ಮಾತನಾಡುವ ಸಂಸದೆ ಶೋಭಾ ಕರಂದ್ಲಾಜೆ,ಮಂಗಳೂರು ವಿಮಾನ ನಿಲ್ದಾಣದಲ್ಲಿಬಾಂಬ್ ಇಟ್ಟವರಕುರಿತುತುಟಿಬಿಚ್ಚುತ್ತಿಲ್ಲ. ಆರೋಪಿಮುಸ್ಲಿಂ ಆಗಿದ್ದರೆ ಸುಮ್ಮನೆ ಇರುತ್ತಿದ್ದರಾ? ಲೌ ಜಿಹಾದ್‌ ಹೆಸರಲ್ಲಿ ಹೆಣ್ಣು ಮಕ್ಕಳ ಮಾರಾಟನಡೆಯುತ್ತಿದೆ ಎಂದು ಬೊಬ್ಬೆ ಹಾಕುವ ಅವರಿಗೆ ರಾಜ್ಯ, ಕೇಂದ್ರದಲ್ಲಿ ತಮ್ಮದೇ ಸರ್ಕಾರ ಇರುವುದು ಮರೆತು ಹೋಯಿತೇ? ಕ್ರಮ ತೆಗೆದುಕೊಳ್ಳಲು ಏನು ಸಮಸ್ಯೆ ಎಂದು ಪ್ರಶ್ನಿಸಿದರು.

ಮಲೆನಾಡಿನಲ್ಲಿ ಬೇರೂರಿರುವ ಮಂಗನ ಕಾಯಿಲೆಕೊರೊನಾಕ್ಕಿಂತ ಭೀಕರ. ವರ್ಷದಲ್ಲಿ23 ಜನರುಬಲಿಯಾಗಿದ್ದಾರೆ. ಈಗಲಾದರೂ ಸರ್ಕಾರ ಕಾಯಿಲೆ ನಿಯಂತ್ರಣಕ್ಕೆಕ್ರಮ ಕೈಗೊಳ್ಳಬೇಕುಎಂದು ಆಗ್ರಹಿಸಿದರು.

ಚಕ್ರವರ್ತಿ ಸೂಲಿಬೆಲೆ, ಸಂಸದತೇಜಸ್ವಿ ಸೂರ್ಯ ದಾರಿತಪ್ಪಿ ಮಾತನಾಡುತ್ತಿದ್ದಾರೆ.ಈಗ ಅವರಿಗೆಬೆಲೆ ಏರಿಕೆ ಅನುಭವಕ್ಕೇ ಬರುತ್ತಿಲ್ಲ.ಸಿಎಎ ವಿರುದ್ಧ ಪ್ರತಿಭಟನೆ ನಡೆಸುವವರು ಪಂಕ್ಚರ್ ಹಾಕುವವರು ಎಂದು ಮಾತನಾಡುತ್ತಾರೆ.ಅವರಿಗೆ ಮೋದಿ ಚಹಾ ಮಾರಾಟ ಮಾಡಿದ್ದು ಮರೆತು ಹೋಗಿದೆ. ಒಂದು ವೃತ್ತಿ ಗೌರವಿಸುವ ಕನಿಷ್ಠ ಸೌಜನ್ಯಕಳೆದುಕೊಂಡಿದ್ದಾರೆ ಎಂದು ಬೇಸರ ತೋಡಿಕೊಂಡರು.

ಬಿಜೆಪಿ ಹೊಗಳಿದ ಕಾರಣಕ್ಕೆ ಸಾಹಿತಿ ಎಸ್.ಎಲ್.ಭೈರಪ್ಪಅವರಿಗೆ ₨ 5 ಕೋಟಿ ನೀಡಲಾಗಿದೆ. ಆಹಣ ಉತ್ತರಕರ್ನಾಟಕದಅಭಿವೃದ್ಧಿಗೆ ಬಳಸಿಕೊಳ್ಳಬಹುದಿತ್ತು. ಸದ್ಯ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಹಾಗೂ ಬಿ.ವೈ.ವಿಜಯೇಂದ್ರ ಮಾತ್ರ ಸುಖಿಜೀವನ ನಡೆಸುತ್ತಿದ್ದಾರೆ ಎಂದು ಛೇಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹುಲ್ತಿಕೊಪ್ಪ ಶ್ರೀಧರ್, ಪ್ರವೀಣ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT