ಬೆಂಗಳೂರು: ಬುಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರ ಪುಸ್ತಕಗಳನ್ನು ಖರೀದಿಸಿ ಪಂಚಾಯಿತಿ ಗ್ರಂಥಾಲಯಗಳಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೋಮವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಅವರನ್ನು ಅಭಿನಂದಿಸಿದರು. ಇದೇ ವೇಳೆ ಇಬ್ಬರಿಗೂ ತಲಾ ₹10 ಲಕ್ಷ ನಗದು ಘೋಷಿಸಿದರು.

ಕನ್ನಡ ಸಾಹಿತ್ಯವನ್ನು ಆಂಗ್ಲ ಭಾಷೆಗೆ ಅನುವಾದ ಮಾಡಲು ಹೆಚ್ಚಿನ ಅನುದಾನ ನೀಡಲಾಗುವುದು. ಪತ್ರಕರ್ತೆಯಾಗಿ, ಲೇಖಕಿಯಾಗಿ, ವಕೀಲರಾಗಿ, ಹೋರಾಟಗಾರ್ತಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿರುವುದೇ ಬಾನು ಮುಷ್ತಾಕ್ ಅವರ ಬರವಣಿಗೆಯ ಶಕ್ತಿ ಎಂದು ವಿಶ್ಲೇಷಿಸಿದರು.

ಲಂಕೇಶ್ ಪತ್ರಿಕೆಯ ಪತ್ರಕರ್ತರಾಗಿ ಬರೆಯುತ್ತಲೇ, ವಕೀಲರಾಗಿ ಬಡವರ ಪರ ವಕಾಲತ್ತು ವಹಿಸುತ್ತಾ ಬಂದವರು. ಹಲವು ಪ್ರಶಸ್ತಿಗಳು ಲಭಿಸಿರುವುದೇ ಬಾನು ಅವರ ಬರವಣಿಗೆಗಳಲ್ಲಿ ಸಮಾಜಮುಖಿ ಸತ್ವ ಇದೆ ಎನ್ನುವುದಕ್ಕೆ ಸಾಕ್ಷ್ಯ. ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ಧ್ವನಿಯಾಗಿ ಮೌಢ್ಯ ವಿರೋಧಿಸಿ ಬರೆಯುವ ಪ್ರಗತಿಪರ ಎದೆಗಾರಿಕೆ ಬಾನು ಅವರಲ್ಲಿದೆ ಎಂದರು.

ಕನ್ನಡದ ರಾಯಭಾರಿಗಳು:

ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಅವರು ವಿಶ್ವಮಟ್ಟದಲ್ಲಿ ಕನ್ನಡದ ರಾಯಭಾರಿಗಳಾಗಿ ಬೆಳಗಿದ್ದಾರೆ. ಬುಕರ್ ಪ್ರಶಸ್ತಿ ಗೆದ್ದು ಕನ್ನಡದ ಜ್ಯೋತಿಯನ್ನು ಬೆಳಗಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ದೀಪಾ ಭಾಸ್ತಿ ಮಾತನಾಡಿ, ‘ಬುಕರ್ ಪ್ರಶಸ್ತಿ ಬಂದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ನನ್ನ ಸರ್ ನೇಮ್ ಬಗ್ಗೆ ಬಸ್ತಿ, ಭಾಸ್ತಿ, ಬಸದಿ, ಬಸಂತಿ ಎಂಬೆಲ್ಲಾ ಯದ್ವಾತದ್ವಾ ಉಚ್ಚಾರಣೆ ಮಾಡಿದ್ದಾರೆ. ನನ್ನ ಹೆಸರು ದೀಪಾ ಭಾಸ್ತಿ’ ಎಂದು ಸ್ಪಷ್ಟಪಡಿಸಿದರು.

‘ಬುಕರ್ ಪ್ರಶಸ್ತಿಯ ಕಾರಣಕ್ಕೆ ಕನ್ನಡದ ಘನತೆ ಹೆಚ್ಚಿದೆ ಎನ್ನುವುದಕ್ಕಿಂತ ಇಂಗ್ಲಿಷ್ಗೆ ಕನ್ನಡದ ಪರಿಚಯವಾಗಿ ಸಂಪರ್ಕ ಬೆಳೆದ ಕಾರಣ ಆಂಗ್ಲ ಭಾಷೆಗೆ ಹೆಮ್ಮೆ ಬಂದಿದೆ. ಭಾಷೆಯ ಬೆಳವಣಿಗೆಗೆ ಅನುವಾದ ಬಲು ಮುಖ್ಯ. ರಾಜ್ಯದಲ್ಲಿರುವ 234 ಭಾಷೆಗಳ ಬಗ್ಗೆ ಚರ್ಚೆಯಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಸಚಿವರಾದ ಜಮೀರ್ ಅಹಮದ್ ಖಾನ್, ಶಿವರಾಜ ತಂಗಡಗಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಸದಸ್ಯರಾದ ಕೆ.ಗೋವಿಂದರಾಜು, ನಸೀರ್ ಅಹ್ಮದ್, ಸಾಹಿತಿ ನಟರಾಜ ಹುಳಿಯಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎಂ.ವಿ.ವೆಂಕಟೇಶ್, ಜಂಟಿ ನಿರ್ದೇಶಕಿ ಬನಶಂಕರಿ ಅಂಗಡಿ ಇದ್ದರು.

‘ಕನ್ನಡ ನೆಲದಲ್ಲಿ ಅಸಹಿಷ್ಣುತೆ ಇಲ್ಲ‘

ಬಾನು ಮುಷ್ತಾಕ್ ಮಾತನಾಡಿ ‘ಪ್ರಶಸ್ತಿ ಬಂದಾಗಿನಿಂದ ದಿನಕ್ಕೆ 4–5 ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದೆ. ಪ್ರಶಸ್ತಿ ಪಡೆದ ಮರುದಿನ 8 ತಾಸು ಸಂದರ್ಶನ ನೀಡಿದೆ. ‘ಕನ್ನಡ ನೆಲದಲ್ಲಿ ಅಸಹಿಷ್ಣುತೆ ಏಕೆ?’ ಎಂದು ಸಂದರ್ಶನದ ಕೊನೆಯಲ್ಲಿ ಉತ್ತರ ಭಾರತದ ಮಾಧ್ಯಮದವರು ಪ್ರಶ್ನಿಸಿದರು. ಅದಕ್ಕೆ ‘ಕನ್ನಡ ಬಗ್ಗೆ ಈ ರೀತಿಯ ನಿಲುವು ತಳೆಯವುದು ತಪ್ಪು. ಕನ್ನಡದಷ್ಟು ಸಹಿಷ್ಣುತೆ ಇರುವ ಭಾಷೆಯನ್ನು ಈವರೆಗೂ ನೋಡಿಲ್ಲ. ಅದಕ್ಕೆ ಕನ್ನಡದ ಸಂಸ್ಕೃತಿ ಮುಖ್ಯ ಕಾರಣವಾಗಿದೆ. ಬಹು ಭಾಷೆಗಳಿಗೆ ಇರುವ ಗೌರವವನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹಿಂದಿಯಲ್ಲಿ ಉತ್ತರಿಸಿದೆ ಎಂದು ಹೇಳಿದರು. ‘ಈ ವಿಷಯದಲ್ಲಿ ಕನ್ನಡದ ನಿಲುವನ್ನು ಸ್ಪಷ್ಟಪಡಿಸುವ ಅಗತ್ಯ ಹಲವು ಬಾರಿ ಬಂದಿದೆ. ಎಂಟು ಜ್ಞಾನಪೀಠ ಮತ್ತು ಒಂದು ಬುಕರ್ ಪ್ರಶಸ್ತಿಯೊಂದಿಗೆ ಬಹುತ್ವ ಮತ್ತು ಎಲ್ಲಾ ದ್ರಾವಿಡ ಭಾಷೆಗಳೊಂದಿಗೆ ಸಹೋದರತ್ವ ಸಂಬಂಧ ಹೊಂದಿದೆ ಎಂಬುದನ್ನು ಉತ್ತರ ಭಾರತದವರಿಗೆ ಮನವರಿಕೆ ಮಾಡಿದ್ದೇನೆ’ ಎಂದರು.‘ತವರು ನೆಲ ನನಗೆ ಸೃಜನಶೀಲತೆಗೆ ಪ್ರೇರಣೆ ನೀಡುವುದರ ಜತೆಗೆ ಜೀವನದ ಹೋರಾಟ ಬದುಕಿಗೆ ಮುಖಾಮುಖಿಯಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.