ಬುಧವಾರ, ಜುಲೈ 28, 2021
27 °C
ಹಸಿರು ಅಭಿಯಾನಕ್ಕೆ ‘ದಿ ಪಾರ್ಕ್‌’ ಹೋಟೆಲ್ ಸಾಥ್

3 ಸಾವಿರ ಸಸಿ ನೆಡಲಿದೆ ‘ನಮ್ಮ ಮೆಟ್ರೊ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಮಹಾತ್ಮ ಗಾಂಧಿ ರಸ್ತೆಯಿಂದ ವಿವೇಕಾನಂದ ರಸ್ತೆಯವರೆಗೆ 3 ಸಾವಿರ ಸಸಿಗಳನ್ನು ನೆಡಲಿದೆ. ಐಷಾರಾಮಿ ಹೋಟೆಲ್‌ ‘ದಿ ಪಾರ್ಕ್‌’ ಈ ಅಭಿಯಾನಕ್ಕೆ ಕೈ ಜೋಡಿಸಿದೆ. 

ಈವರೆಗೆ 500ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ‘ನಮ್ಮ ಮೆಟ್ರೊ’ ನಿಲ್ದಾಣದ ಬಳಿ ಇರುವ ವಾಹನ ನಿಲುಗಡೆ ಪ್ರದೇಶ, ಪಾದಚಾರಿ ಮಾರ್ಗ, ವಿಭಜಕಗಳ ಬಳಿಯ ಲಭ್ಯ ಇರುವ ಖಾಲಿ ಜಾಗದಲ್ಲಿ ಸಸಿಗಳನ್ನು ನೆಡಲಾಗುತ್ತಿದೆ. 

‘ಬೆಂಗಳೂರಿನಲ್ಲಿ ಕೈಗಾರಿಕಾ ವಲಯವು ತೀವ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಪರಿಸರ ಸಮತೋಲನ ಕಾಪಾಡಲು ಇಂತಹ ಕ್ರಮಗಳು ಅನಿವಾರ್ಯ. ‘ನಮ್ಮ ಮೆಟ್ರೊ’ ನಿಲ್ದಾಣಗಳ ಬಳಿಯಲ್ಲಿ ಮಾತ್ರವಲ್ಲದೆ, ನಮ್ಮ ಕಂಪನಿಯ ಎಲ್ಲ ಹೋಟೆಲ್‌ಗಳ ಆವರಣದಲ್ಲಿಯೂ ಸಸಿ ನೆಡಲು ಕ್ರಮ ಕೈಗೊಂಡಿದ್ದೇವೆ’ ಎಂದು ‘ದಿ ಪಾರ್ಕ್‌’ ಸಂಸ್ಥೆ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು