ಬೆಂಗಳೂರು: ದೇಶದಲ್ಲಿ ಅತಿ ಹೆಚ್ಚು ಕಬ್ಬಿಣದ ಅದಿರು ಇರುವ ಕರ್ನಾಟಕದಲ್ಲಿ ಎರಕದ ಉದ್ಯಮ ಉತ್ತೇಜಿಸಲು ದಾಬಸ್ಪೇಟೆಯಲ್ಲಿ `ಫೌಂಡ್ರಿ ಕ್ಲಸ್ಟರ್~ ಅನ್ನು ಮುಂದಿನ ಆರು ತಿಂಗಳಲ್ಲಿ ಸ್ಥಾಪಿಸಲಾಗುತ್ತಿದೆ.

ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಶುಕ್ರವಾರ ಆರಂಭವಾದ ಮೂರು ದಿನಗಳ 60ನೇ ಇಂಡಿಯನ್ ಫೌಂಡ್ರಿ ಕಾಂಗ್ರೆಸ್ ಉದ್ಘಾಟಿಸಿದ ರಾಜ್ಯ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ಅವರು ಈ ವಿಷಯ ತಿಳಿಸಿದರು.

ಉದ್ದೆೀಶಿತ `ಫೌಂಡ್ರಿ ಪಾರ್ಕ್~ನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ, ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದು ಈಗಾಗಲೇ ಚಾಲನೆಯಲ್ಲಿ ಇರುವ ಬೆಳಗಾವಿಯ ನಂತರದ ಎರಡನೇಯ ಕೈಗಾರಿಕಾ ವಸಾಹತು ಎನಿಸಿಕೊಳ್ಳಲಿದೆ.

ಉದ್ಯಮದ ಉತ್ತೇಜನಕ್ಕೆ ನೀಡಲಾಗಿರುವ ಹಲವಾರು ಯೋಜನೆಗಳ ಪ್ರಯೋಜನವನ್ನು ಫೌಂಡ್ರಿ ಉದ್ಯಮ ಪಡೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರದ ಕಿರು, ಸಣ್ಣ ಹಾಗೂ ಮಧ್ಯಮ ಉದ್ದಿಮೆ ಕಾರ್ಯದರ್ಶಿ ಆರ್.ಕೆ.ಮಾಥುರ್ ಸಲಹೆ ನೀಡಿದರು. ಐಐಎಫ್ ಅಧ್ಯಕ್ಷ ಡಾ.ಎಚ್.ಸುಂದರ ಮೂರ್ತಿ ಮತ್ತಿತರರು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.