ಗುರುವಾರ , ನವೆಂಬರ್ 26, 2020
21 °C

ಅಕ್ರಮವಾಗಿ ಸಾಗಿಸುತ್ತಿದ್ದ 30 ಗೋವುಗಳ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ 30 ಗೋವುಗಳನ್ನು ರಕ್ಷಣೆ ಮಾಡಲಾಗಿದ್ದು, ಈ ಸಂಬಂಧ ಆರ್‌.ಎಂ.ಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿದ್ದ ಕಂಟೇನರ್ ವಾಹನವನ್ನು ಗೋರಗುಂಟೆಪಾಳ್ಯ ಬಳಿ ತಡೆದು ತಪಾಸಣೆ ನಡೆಸಲಾಯಿತು. ಕಂಟೇನರ್‌ನಲ್ಲಿ ಗೋವುಗಳು ಇರುವುದನ್ನು ಕಂಡು ದಾಖಲೆಗಳನ್ನು ಕೇಳಿದ್ದೆವು. ದಾಖಲೆ ತೋರಿಸುವ ನೆಪದಲ್ಲಿ ವಾಹನದಿಂದ ಇಳಿದಿದ್ದ ಚಾಲಕ, ಸ್ಥಳದಿಂದ ಓಡಿ ಹೋಗಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

‘ಸ್ವಯಂ ಸೇವಾ ಸಂಘಟನೆಯೊಂದರ ಮಾಹಿತಿಯಂತೆ ಈ ತಪಾಸಣೆ ನಡೆಸಲಾಯಿತು. ವಾಹನದ ಕ್ಲೀನರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದರು.

‘ಗೋವುಗಳ ಕಾಲು ಹಾಗೂ ಬಾಯಿ ಕಟ್ಟಿಹಾಕಿ ನಗರಕ್ಕೆ ಸಾಗಿಸಲಾಗುತ್ತಿತ್ತು. ಆದರೆ, ಅವುಗಳನ್ನು ನಗರದಲ್ಲಿ ಯಾವ ಪ್ರದೇಶಕ್ಕೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂಬುದು ಗೊತ್ತಾಗಿಲ್ಲ’ ಎಂದೂ ಪೊಲೀಸರು
ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.