ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದನಗಳ ಜಾತ್ರೆ: ಗಡೇನಹಳ್ಳಿ ಎತ್ತುಗಳಿಗೆ ₹3.25 ಲಕ್ಷ

Last Updated 18 ಫೆಬ್ರುವರಿ 2023, 20:00 IST
ಅಕ್ಷರ ಗಾತ್ರ

ಪೀಣ್ಯ ದಾಸರಹಳ್ಳಿ: ಹೆಸರಘಟ್ಟದ ತೋಟಗೆರೆ ಬಸವಣ್ಣ ದೇವಸ್ಥಾನ ಬಳಿಯ ಹಿತಚಿಂತನ ಚಾರಿಟಬಲ್ ಟ್ರಸ್ಟ್ ವತಿಯಿಂದ 5ನೇ ವರ್ಷದ ದನಗಳ ಜಾತ್ರೆ ನಡೆಯಿತು.

ಬ್ಯಾತ, ಕೊಡಿಹಳ್ಳಿ, ಕಗ್ಗಲಿಪಾಳ್ಯ, ಹುಸ್ಕೂರು, ಹೆಸರಘಟ್ಟ, ಗಡೇನಹಳ್ಳಿ, ರಾಮದೇವನಹಳ್ಳಿ, ಕನ್ನಮಂಗಲ, ಮದ್ಕೂರು, ಅಗ್ರಹಾರ ಮುಂತಾದ ಹಳ್ಳಿಗಳಿಂದ ದನಗಳನ್ನು ಕರೆತಂದಿ
ದ್ದರು. ಚರ್ಮಗಂಟು ರೋಗದಿಂದಾಗಿ ಜಾತ್ರೆಗೆ ಬಂದ ಎತ್ತುಗಳ ಸಂಖ್ಯೆ
ಕಡಿಮೆ ಇತ್ತು.

ಜಾತ್ರೆಯಲ್ಲಿ ಗಡೇನಹಳ್ಳಿಯಿಂದ ಬಂದಿದ್ದ ಎತ್ತುಗಳು ₹ 3.25 ಲಕ್ಷಕ್ಕೆ ಮಾರಾಟವಾದವು. ಅವುಗಳ ಮಾಲೀಕ ಸುರೇಶ್ ಅವರು 100 ಗ್ರಾಂ ಬೆಳ್ಳಿಯ ಬಹುಮಾನ ಪಡೆದುಕೊಂಡರು.

ಹುಸ್ಕೂರಿನ ರೈತ ಗಿರಿಗೌಡ ತಂದಿದ್ದ ಎತ್ತುಗಳು ₹ 3 ಲಕ್ಷಕ್ಕೆ ಮಾರಾಟವಾದವು. 2ನೇ ಬಹುಮಾನದ ರೂಪದಲ್ಲಿ ಗಿರಿಗೌಡ 50 ಗ್ರಾಂ ಬೆಳ್ಳಿ ಪಡೆದುಕೊಂಡರು.

3ನೇ ಬಹುಮಾನ ಬೀರಯ್ಯನ ಪಾಳ್ಯದ ಕೇಶವಮೂರ್ತಿ ಅವರಿಗೆ ಸಂದಿತು. ಅವರ ಎತ್ತುಗಳು ₹ 2.80 ಲಕ್ಷಕ್ಕೆ ಮಾರಾಟವಾದವು. ಅವರು 30 ಗ್ರಾಂ ಬೆಳ್ಳಿ ಪಡೆದರು. ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ‘ಹುತಾತ್ಮರಾದ ಯೋಧರ ಕುಟುಂಬದವರಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಜಾತ್ರೆ ಅಂಗವಾಗಿ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ’ ಎಂದರು.

ಶಿವರಾತ್ರಿ ಹಬ್ಬದ ಪ್ರಯುಕ್ತ ಸೂರ್ಯ ಲಕ್ಷ ದೀಪೋತ್ಸವ ಮತ್ತು ಮಹಿಷಾಸುರ ಮರ್ದಿನಿ ಎಂಬ ಯಕ್ಷಗಾನ ಮತ್ತು ಸಾಂಸ್ಕೃತಿಕ ರಸ ಸಂಜೆ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT