ಮಂಗಳವಾರ, ಮೇ 26, 2020
27 °C

ಕಂಟೈನ್‌ಮೆಂಟ್‌ ಪ್ರದೇಶ: ಹೊಸದಾಗಿ 5 ವಾರ್ಡ್‌ ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌–19 ಸೋಂಕು ಪತ್ತೆಯಾದ ಹೊಸ 5 ವಾರ್ಡ್‌ಗಳನ್ನು ಕಂಟೈನ್‌ಮೆಂಟ್ ಪ್ರದೇಶ ಎಂದು ಬಿಬಿಎಂಪಿ ಘೋಷಿಸಿದೆ. ಜೊತೆಗೆ ಮೂರು ವಾರ್ಡ್‌ಗಳನ್ನು ಕಂಟೈನ್‌ಮೆಂಟ್ ನಿರ್ಬಂಧದಿಂದ ಕೈಬಿಡಲಾಗಿದ್ದು, ಸದ್ಯ 21 ವಾರ್ಡ್‌ಗಳು ಈ ಪಟ್ಟಿಯಲ್ಲಿವೆ.

ಪುಟ್ಟೇನಹಳ್ಳಿ, ವನ್ನಾರ್‌ಪೇಟೆ, ಲಕ್ಕಸಂದ್ರ, ಮಾರಪ್ಪನಪಾಳ್ಯ ಮತ್ತು ತಣಿಸಂದ್ರ ವಾರ್ಡ್‌ಗಳು ಕಂಟೈನ್‌ಮೆಂಟ್ ವಲಯಕ್ಕೆ ಎರಡು ದಿನಗಳಿಂದ ಸೇರ್ಪಡೆಯಾಗಿವೆ. ಐದೂ ವಾರ್ಡ್‌ಗಳಲ್ಲಿ ತಲಾ ಒಂದು ಕೋವಿಡ್–19 ಪ್ರಕರಣ ಪತ್ತೆಯಾಗಿದೆ.

ಹಂಪಿನಗರ, ಭೈರಸಂದ್ರ ಮತ್ತು ಯಶವಂತಪುರ ವಾರ್ಡ್‌ಗಳನ್ನು ಈ ವಲಯದ ಪಟ್ಟಿಯಿಂದ ಕೈಬಿಡಲಾಗಿದೆ. ದೀಪಾಂಜಲಿನಗರ ವಾರ್ಡ್‌ನಲ್ಲಿ ಮಂಗಳವಾರ ಮತ್ತು ಬಿಳೇಕಹಳ್ಳಿ ವಾರ್ಡ್‌ನಲ್ಲಿ ಶುಕ್ರವಾರ ನಿರ್ಬಂಧ ಕೊನೆಗೊಳ್ಳಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು