ಬೆಂಗಳೂರು: ಬಿಟಿಎಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಅನಿಲ್ ಶೆಟ್ಟಿ ಮನೆ ಮೇಲೆ ಚುನಾವಣಾಧಿಕಾರಿ ತಂಡ ದಾಳಿ ಮಾಡಿದ್ದು, 504 ಕುಕ್ಕರ್ ಜಪ್ತಿ ಮಾಡಿದೆ.
‘ಕೋರಮಂಗಲ 4ನೇ ಹಂತದಲ್ಲಿರುವ ಅನಿಲ್ ಶೆಟ್ಟಿ ಮನೆಯಲ್ಲಿ ಕುಕ್ಕರ್ ಸಂಗ್ರಹಿಸಿದ್ದ ಬಗ್ಗೆ ಮಾಹಿತಿ ಬಂದಿತ್ತು. ಮತದಾರರ ನೋಂದಣಾಧಿಕಾರಿ ವರಲಕ್ಷ್ಮಮ್ಮ ನೇತೃತ್ವದ ತಂಡ ಮಾರ್ಚ್ 28ರಂದು ದಾಳಿ ಮಾಡಿದೆ’ ಎಂದು ಪೊಲೀಸರು ಹೇಳಿದರು.
‘ಮನೆಯ ನೆಲ ಮಹಡಿ ಕೊಠಡಿಯಲ್ಲಿ 10 ಕುಕ್ಕರ್ ಹಾಗೂ 2ನೇ ಮಹಡಿಯ ಕೊಠಡಿಯಲ್ಲಿ 494 ಕುಕ್ಕರ್‌ಗಳು ಪತ್ತೆಯಾಗಿವೆ. ದಾಳಿ ವೇಳೆ ಅನಿಲ್ ಶೆಟ್ಟಿ ಮನೆಯಲ್ಲಿ ಇರಲಿಲ್ಲ. ಮತದಾರರಿಗೆ ಹಂಚಲೆಂದು ಕುಕ್ಕರ್ ಸಂಗ್ರಹಿಸಿಟ್ಟಿದ್ದು ಗೊತ್ತಾಗಿದೆ. ಈ ಬಗ್ಗೆ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.