ಬೆಂಗಳೂರು: ‘ಎಸ್ಸೆಸ್ಸೆಲ್ಸಿ ಓದುವಾಗ ಶಾಲೆಗೆ ಚಕ್ಕರ್ ಹಾಕಿ ದಿನಕ್ಕೆ 5 ಸಿನಿಮಾಗಳನ್ನು ನೋಡುತ್ತಿದ್ದೆ’ ಎಂದು ಚಲನಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡರು.

ಸದಾಶಿವನಗರ ವೀರಶೈವ ಸಮಾಜವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಳ್ಳಿಯಲ್ಲಿದ್ದಾಗ ಟೆಂಟ್ಗಳಲ್ಲಿ ಸಿನಿಮಾಗಳನ್ನು ವೀಕ್ಷಿಸುತ್ತಿದ್ದೆ. ಬಳಿಕ ನನ್ನನ್ನು ಬೆಂಗಳೂರಿನಲ್ಲಿ ಶಾಲೆಗೆ ಸೇರಿಸಿದರು. ಆದರೆ, ನನಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಈ ಕಾರಣಕ್ಕೆ ಶಾಲೆಗೆ ಹೋಗದೆ ದಿನಪೂರ್ತಿ ಸಿನಿಮಾ ನೋಡುತ್ತಿದ್ದೆ. ಅದರ ಪ್ರತಿಫಲವಾಗಿ ಎಸ್ಸೆಸ್ಸೆಲ್ಸಿಯಲ್ಲಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದೆ. ನನ್ನ ಜೀವನಕ್ಕೆ ತಿರುವು ಸಿಕ್ಕಿದ್ದೆ ಆಗ’ ಎಂದು ಹೇಳಿದರು.

‘ಕ್ರಮೇಣ ಗಾಂಧಿನಗರದ ನಂಟು ಬೆಳೆದುಕೊಂಡಿತು. ಅಲ್ಲಿ ಕೆಲವೊಂದು ಕಹಿ ಅನುಭವಗಳಾದವು. ಅವುಗಳಿಂದ ಜೀವನದಲ್ಲಿ ಸಾಕಷ್ಟು ಪಾಠ ಕಲಿತೆ. ಚಿತ್ರರಂಗದ ಸಂಬಂಧ ಮತ್ತಷ್ಟು ಗಾಢವಾಗಿ ಬೆಳೆಯಿತು. ಆ ಕಹಿ ಅನುಭವಗಳ ಆಧಾರದ ಮೇಲೆಯೇ ಸಿನಿಮಾಗಳನ್ನು ನಿರ್ಮಿಸಿದೆ’ ಎಂದು ತಿಳಿಸಿದರು.

ಸಿನಿಮಾ ಎಂಬುದು ಕೇವಲ ಮನರಂಜನೆಯಲ್ಲ. ಅದು ಜ್ಞಾನ ವಿಸ್ತಾರದ ವೇದಿಕೆ. ಸಮಾಜದ ನಿರ್ಲಕ್ಷ್ಯಕ್ಕೆ ಒಳಗಾದವರನ್ನು ಮುಖ್ಯವಾಹಿನಿಗೆ ಕರೆತಂದು ಅವರ ನೋವುಗಳಿಗೆ ಸ್ಪಂದಿಸುವ ಶಕ್ತಿ ಸಿನಿಮಾಗಳಿಗಿದೆ. ‘ನಾನು ಅವನಲ್ಲ..ಅವಳು’ ಸಿನಿಮಾವೇ ಅದಕ್ಕೆ ಉದಾಹರಣೆ ಎಂದು ಹೇಳಿದರು.

ಲಭ್ಯವಿರುವ ಎಲ್ಲ ಹಾದಿಗಳನ್ನು ಬಳಸಿಕೊಂಡು ನಿರ್ದೇಶಕ ಸಿನಿಮಾವನ್ನು ಜನರಿಗೆ ತಲುಪಿಸಬೇಕು. ಆಗ ಆತ್ರವೇ ಆ ಚಿತ್ರವು ಗೆಲ್ಲುವ ಸಾಧ್ಯತೆ ಹೆಚ್ಚು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.