ಬೆಂಗಳೂರು: ಐದು ವರ್ಷಗಳಲ್ಲಿ ಕರ್ನಾಟಕವು ₹7.60 ಲಕ್ಷ ಕೋಟಿ ಬಂಡವಾಳ ಹೂಡಿಕೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಇದು ಸಾವಯವ ಆಹಾರ ಉತ್ಪಾದಕರು ಮತ್ತು ಮಾರ್ಕೆಟಿಂಗ್ ಏಜೆನ್ಸಿಗಳ ಒಕ್ಕೂಟ (ಸಿಒಐಐ) ಹಾಗೂ ರಫ್ತು ಉತ್ತೇಜನಾ ಮಂಡಳಿ ನಡೆಸಿದ ಅಧ್ಯಯನ ವರದಿಯ ಮಾಹಿತಿ.
2022-23ನೇ ಸಾಲಿನಲ್ಲಿ ₹4,51,516.2 ಕೋಟಿ, 2021-22ರಲ್ಲಿ ₹79,816.4 ಕೋಟಿ, 2020-21ರಲ್ಲಿ ₹74,967.7 ಕೋಟಿ, 2019-20ನೇ ಸಾಲಿನಲ್ಲಿ ₹94,361.8 ಕೋಟಿ ಹಾಗೂ 2018-19ರಲ್ಲಿ ₹59,273.8 ಕೋಟಿ ಹೂಡಿಕೆಯಾಗಿದೆ. 2022-23ರಲ್ಲಿ ₹39,664.05 ಕೋಟಿ, 2021-22ರಲ್ಲಿ ₹21,336.2 ಕೋಟಿ, 2020-21ರಲ್ಲಿ ₹11,415.5 ಕೋಟಿ ಯೋಜನೆಗಳನ್ನು ಪೂರ್ಣಗೊಳಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ಡಿ.ಎಸ್.ರಾವತ್ ಮಾಹಿತಿ ನೀಡಿದ್ದಾರೆ.
2022-23ನೇ ಸಾಲಿನಲ್ಲಿ ₹16,43,466.3 ಕೋಟಿ, ₹8,22,070.4 ಕೋಟಿ ಅನುಷ್ಠಾನದ ಹಂತದಲ್ಲಿವೆ. ಬಾಕಿ ಉಳಿದಿರುವ ಯೋಜನೆಗಳ ಅನುಷ್ಠಾನ ಪೂರ್ಣಗೊಂಡ ನಂತರ ರಾಜ್ಯದಲ್ಲಿ 5 ಲಕ್ಷಕ್ಕೂ ಹೆಚ್ಚು ಉದ್ಯೋಗಗಳ ಸೃಷ್ಟಿಯಾಗಲಿವೆ ಎಂದಿದ್ದಾರೆ.
2022-23ನೇ ಸಾಲಿನಲ್ಲಿ ಖಾಸಗಿ ವಲಯದಲ್ಲಿ ₹4,07,855.5 ಕೋಟಿ ಘೋಷಿಸಲಾದ ಹೊಸ ಹೂಡಿಕೆ. ಇದೇ ಅವಧಿಯಲ್ಲಿ ವಿದೇಶಿ ಖಾಸಗಿ ಹೂಡಿಕೆಯಲ್ಲೂ ಹೆಚ್ಚಳವಾಗಿದೆ. ₹66,334.9 ಕೋಟಿ ಯೋಜನೆಗಳು ಪೂರ್ಣಗೊಂಡಿವೆ ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕ 8.5 ಲಕ್ಷಕ್ಕೂ ಹೆಚ್ಚು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ನೆಲೆಯಾಗಿದೆ. 60 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ರಾಜ್ಯ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದರೂ, ಜಾಗತಿಕ ಸ್ಪರ್ಧೆಯಿಂದಾಗಿ ಸಣ್ಣ ಉದ್ಯಮಗಳು ಹಲವು ಸವಾಲುಗಳನ್ನು ಎದುರಿಸುತ್ತಿವೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.