ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಆಧಾರ್, ಚುನಾವಣಾ ಗುರುತಿನ ಚೀಟಿ, ಪಾನ್‌ಕಾರ್ಡ್ ತಯಾರಿ ಜಾಲ; 9  ಮಂದಿ ಬಂಧನ

Last Updated 4 ಜನವರಿ 2021, 7:35 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ಆಧಾರ್, ಚುನಾವಣಾ ಗುರುತಿನ ಚೀಟಿ, ಪಾನ್‌ಕಾರ್ಡ್ ಹಾಗೂ ಇತರೆ ದಾಖಲೆಗಳನ್ನು ತಯಾರಿಸುತ್ತಿದ್ದ ಜಾಲವನ್ನು ನಗರದ ಸಿಸಿಬಿ ಪೊಲೀಸರು ಭೇದಿಸಿದ್ದು, ಜಾಲದಲ್ಲಿದ್ದ 9 ಆರೋಪಿಗಳನ್ನು ಬಂಧಿಸಿದ್ದಾರೆ.

'ಕನಕಪುರ ರಸ್ತೆಯ ಗುಬ್ಲಾಳ ಗ್ರಾಮದ ಕಮಲೇಶ್ ಕುಮಾರ್ ಭವಾಲಿಯಾ, ಪುಟ್ಟೇನಹಳ್ಳಿಯ ಎಸ್. ಲೋಕೇಶ್, ಶಾಂತಿನಗರದ ಸುದರ್ಶನ್, ನಿರ್ಮಲ್‌ಕುಮಾರ್, ಕೆಂಗೇರಿಯ ದರ್ಶನ್, ಹಾಸನದ ಗವೇನಹಳ್ಳಿಯ ಶ್ರೀಧರ್, ಜ್ಞಾನಭಾರತಿಯ ಚಂದ್ರಪ್ಪ, ವಿಜಯನಗರ ಮಾರೇನಹಳ್ಳಿಯ ಅಭಿಲಾಶ್, ಬಸವೇಶ್ವರ ನಗರದ ತೇಜಸ್ ಹಾಗೂ ವಿಜಯನಗರದ ಶ್ರೀಧರ್ ದೇಶಪಾಂಡೆ ಬಂಧಿತರು. ಇವರೆಲ್ಲರ ವಿರುದ್ಧ ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

'ಆರೋಪಿಗಳಾದ ಎಸ್. ಲೋಕೇಶ್ ಹಾಗೂ ಇತರರು, ಸರ್ಕಾರಿ ಇಲಾಖೆಗಳ ದಾಖಲೆಗಳನ್ನು ತಯಾರಿಸಿಕೊಡುವ ಗುತ್ತಿಗೆ ಪಡೆದಿರುವ ರೋಸ್ ಮಾರ್ಟ್ ಕಂಪನಿ ನೌಕರರು. ಇವರೆಲ್ಲ ಕಂಪನಿ ಬಳಿಯ ಮಾಹಿತಿ ಕದ್ದು, ಜಾಲದ ಆರೋಪಿಗಳಿಗೆ ನೀಡುತ್ತಿದ್ದರು. ನಂತರ, ಶಾಂತಿಗರದಲ್ಲಿ ಬ್ರಿಗೇಡ್ ಪ್ರಿಂಟ್ಸ್ ಮಳಿಗೆಯಲ್ಲಿ ನಕಲಿ ಕಾರ್ಡ್‌ಗಳನ್ನು ತಯಾರಿಸಲಾಗುತ್ತಿತ್ತು. ಅದೇ ಕಾರ್ಡ್‌ಗಳನ್ನು ಆರೋಪಿ ತನ್ನ ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದ' ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

'ಆರೋಪಿಗಳಿಂದ 9,000 ನಕಲಿ ಆಧಾರ್ ಕಾರ್ಡ್, 9,000 ನಕಲಿ ಪಾನ್‌ಕಾರ್ಡ್, 12,450 ನಕಲಿ ವಾಹನ ನೋಂದಣಿ ಸ್ಮಾರ್ಟ್ ಕಾರ್ಡ್, 28,000ಕ್ಕೂ ಹೆಚ್ಚು ನಕಲಿ ಚುನಾವಣಾ ಗುರುತಿನ ಚೀಟಿ, 3 ಲ್ಯಾಪ್‌ಟಾಪ್, 3 ಪ್ರಿಂಟರ್ ಹಾಗೂ ₹ 67,000 ನಗದು ಜಪ್ತಿ ಮಾಡಲಾಗಿದೆ' ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT