ಬೆಂಗಳೂರು: ಸಿಲಿಕಾನ್ ಸಿಟಿಗೆ ಶೀಘ್ರದಲ್ಲೇ ಇನ್ನಷ್ಟು ಎಲೆಕ್ಟ್ರಿಕ್ ಬಸ್‌ಗಳನ್ನು ಬಿಎಂಟಿಸಿ ಪರಿಚಯಿಸಲಿದ್ದು, 12 ಮೀಟರ್ ಉದ್ದದ 921 ಬಸ್‌ಗಳನ್ನು ಒದಗಿಸುವ ಗುತ್ತಿಗೆಯು ಟಾಟಾ ಮೋಟರ್ಸ್ ಕಂಪನಿ ಪಾಲಾಗಿದೆ.

ಅತಿ ಕಡಿಮೆ ಬಿಡ್ ದಾಖಲಿಸಿದ್ದ ಟಾಟಾ ಮೋಟರ್ಸ್ ಈ ಗುತ್ತಿಗೆ ತನ್ನದಾಗಿಸಿಕೊಂಡಿದ್ದು, ವಿವಿಧ ಹಂತಗಳಲ್ಲಿ ಬಸ್‌ಗಳನ್ನು ಪೂರೈಸಲಿದೆ.

ಚಾಲಕ ಮತ್ತು ನಿರ್ವಹಣೆ ಜವಾಬ್ದಾರಿಯನ್ನು ಟಾಟಾ ಮೋಟರ್ಸ್ ಕಂಪನಿಯೇ ನೋಡಿಕೊಳ್ಳಲಿದ್ದು, ನಿರ್ವಾಹಕರು ಮಾತ್ರ ಬಿಎಂಟಿಸಿ ಸಿಬ್ಬಂದಿ ಇರಲಿದ್ದಾರೆ. ಈ ಬಸ್‌ಗಳ ವಿನ್ಯಾಸವನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿ ನಿರ್ಮಿಸುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಟಾಟಾ ಮೋಟಾರ್ಸ್ ಉಪಾಧ್ಯಕ್ಷ(ಬಸ್ ತಯಾರಿಕೆ) ರೋಹಿತ್ ಶ್ರೀವಾಸ್ತವ್, ‘ಇ-ಬಸ್ ಪೂರೈಸಲು ಗುತ್ತಿಗೆ ಸಿಕ್ಕಿರುವುದು ಸಂತಸದ ವಿಷಯ. ದೆಹಲಿ ಸಾರಿಗೆ ನಿಗಮದಿಂದ 1,500 ಬಸ್‌ಗಳು, ಪಶ್ಚಿಮ ಬಂಗಾಳದಿಂದ 1,180 ಬಸ್‌ಗಳ ಪೂರೈಕೆಗೆ ಗುತ್ತಿಗೆ ದೊರತಿದೆ. 30 ದಿನಗಳ ಅಂತರದಲ್ಲಿ ಒಟ್ಟಾರೆ 3,600 ಇ-ಬಸ್‌ಗಳನ್ನು ಪೂರೈಸಲು ಕಾರ್ಯಾದೇಶ ಸಿಕ್ಕಿದೆ’ ಎಂದು ಹೇಳಿದರು.

‘ಜಾಗತಿಕ ಟೆಂಡರ್‌ನಲ್ಲಿ ಭಾಗವಹಿಸಿದ್ದ ಟಾಟಾ ಮೋಟಾರ್ಸ್ ಕಂಪನಿಗೆ ಈ ಗುತ್ತಿಗೆ ದೊರೆತಿದೆ. 921 ಎಲೆಕ್ಟ್ರಿಕ್ ಬಸ್‌ಗಳನ್ನು ವಿವಿಧ ಹಂತಗಳಲ್ಲಿ ಆ ಕಂಪನಿ ಪೂರೈಸಲಿದೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.