ಶುಕ್ರವಾರ, ಸೆಪ್ಟೆಂಬರ್ 17, 2021
31 °C

ಬೆಂಗಳೂರು | 140 ಮನೆಗಳಿಗೆ ಸ್ಯಾನಿಟೈಸ್‌ ಮಾಡಿಸಿದ ವ್ಯಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಾಲಿಕೆಯ ವತಿಯಿಂದ ಸಾಮಾನ್ಯವಾಗಿ ಕೊರೊನಾ ಸೋಂಕು ನಿವಾರಕ ಸಿಂಪಡಣೆ ಮಾಡಲಾಗುತ್ತದೆ. ಆದರೆ, ಮಲ್ಲೇಶ್ವರದಲ್ಲಿ ವ್ಯಕ್ತಿಯೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ ‌ಸುತ್ತಮುತ್ತಲ 140ಕ್ಕೂ ಹೆಚ್ಚು ಮನೆಗಳಿಗೆ ಸ್ಯಾನಿಸೈಸ್ ಮಾಡಿಸಿದ್ದಾರೆ.

ಮಲ್ಲೇಶ್ವರದ ನಿವಾಸಿಯೂ ಆಗಿರುವ ಭವಸಾರ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ವರ್ಣೆ ಅವರು 4ನೇ ದೇವಸ್ಥಾನ ರಸ್ತೆಯ 13ರಿಂದ 15ನೇ ಕ್ರಾಸ್ ತನಕ ಇರುವ ಮನೆಗಳ ಎಲ್ಲಾ ಅಂತಸ್ತುಗಳಿಗೆ, ವಾಹನಗಳಿಗೆ, ರಸ್ತೆ ಸೇರಿ ಗಲ್ಲಿಯನ್ನೂ ಬಿಡದೆ ಸ್ಯಾನಿಟೈಸ್‌ ಮಾಡಿದ್ದಾರೆ.

‘ಬಿಬಿಎಂಪಿ ಸಿಬ್ಬಂದಿ ಒಮ್ಮೆಯೂ ಇಲ್ಲಿ ಸಿಂಪಡಣೆ ಮಾಡಿಲ್ಲ. ಮಾಡಿದರೂ ಬ್ಲೀಚಿಂಗ್ ಪೌಡರ್‌ಗೆ ನೀರು ಬೆರೆಸಿ ಸಿಂಪಡಿಸುತ್ತಾರೆ. ನಾನು 150 ಕೆ.ಜಿಯಷ್ಟು ಸೋಡಿಯಂ ಹೈಪೋ ಕ್ಲೋರೈಡ್ ಬಳಸಿ ಸ್ಯಾನಿಟೈಸ್ ಮಾಡಿಸಿದ್ದೇನೆ’ ಎಂದು ಯೋಗೇಂದ್ರ ವರ್ಣೆ ತಿಳಿಸಿದರು.

‘ನಮ್ಮ ಮನೆಯವರಷ್ಟೇ ಸುರಕ್ಷಿತವಾಗಿದ್ದರೆ ಸಾಲದು, ಸುತ್ತಮುತ್ತಲ ಜನರೂ ಸುರಕ್ಷಿತವಾಗಿ ಇರುವುದು ಈಗ ಮುಖ್ಯ. ಹೀಗಾಗಿ ಸಿಂಪಡಣೆ ಮಾಡಿಸಿದ್ದೇನೆ. ಮುಂದಿನ ದಿನಗಳಲ್ಲೂ ಬೇಕಾಗಲಿದೆ ಎಂಬ ಕಾರಣಕ್ಕೆ ಸಿಂಪಡಣೆ ಯಂತ್ರವನ್ನೇ ಖರೀದಿ ಮಾಡಿದ್ದೇನೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು