ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ ತೆರವಿಗೆ ಸೂಚನೆ

ಸ್ಥಳೀಯ ಸಂಸ್ಥೆಗಳ ಸದನ ಸಮಿತಿಯಿಂದ ಹುಳಿಮಾವು ಕೆರೆ ಸಮೀಕ್ಷೆ
Last Updated 12 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು:ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಸ್ಥಳೀಯ ಸಂಸ್ಥೆಗಳ ಸದನ ಸಮಿತಿಯು ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಹಾಗೂ ಹುಳಿಮಾವು ಕೆರೆ ಪ್ರದೇಶವನ್ನು ಗುರುವಾರ ಪರಿಶೀಲಿಸಿ, ಜಲಕಾಯದ ಒತ್ತುವರಿಯನ್ನು ತೆರವುಗೊಳಿಸುವಂತೆ ಸೂಚಿಸಿತು.

‘ಮೂರು ವರ್ಷಗಳ ಹಿಂದೆಯೂಈ ಕೆರೆಗಳ ಸರ್ವೆ ನಡೆಸಲಾಗಿದೆ. ಈವರೆಗೆ ಒತ್ತುವರಿದಾರರ ಮೇಲೆ ಕ್ರಮ ಕೈಗೊಂಡಿಲ್ಲ. ಕೆರೆಗಳ ಪಕ್ಕದಲ್ಲಿಯೇ ಎತ್ತರದ ಕಟ್ಟಡಗಳಿವೆ. ಕೆಲವರು ಜಲಕಾಯದ ಮೀಸಲು ಪ್ರದೇಶವನ್ನೂ ಅತಿಕ್ರಮಣ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅಧಿಕಾರಿಗಳಿಗೆ ಒತ್ತುವರಿಯನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ’ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಸಮೀಕ್ಷೆ ವರದಿಯ ಪ್ರಕಾರ ಹುಳಿಮಾವು ಕೆರೆಯ ಅಧಿಕ ಪ್ರದೇಶವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೇ (ಬಿಡಿಎ) ಒತ್ತುವರಿ ಮಾಡಿದೆ. ಸುಮಾರು 18 ಎಕರೆ 30 ಗುಂಟೆ ಒತ್ತುವರಿ ಮಾಡಿದೆ.

ಎಲೆ ಮಲ್ಲಪ್ಪ ಶೆಟ್ಟಿ ಕೆರೆಯ ಪ್ರದೇಶದ ಮೇಲೆ ಕಟ್ಟಡ ಅವಶೇಷಗಳನ್ನು ಎಸೆದಿರುವ ಬಗ್ಗೆ ದೂರು ದಾಖಲಿಸಿದರೂ ಪೊಲೀಸರು ಈವರೆಗೂ ಎಫ್‌ಐಆರ್ ದಾಖಲಿಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT