ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಸ್ಮೃತಿಗೆ ಸರಿದ ಘಟನೆಗಳಿಗೆ ಜೀವಂತಿಕೆ ನೀಡುವ ಕೃತಿ -ನೇಮಿಚಂದ್ರ

Last Updated 30 ಜನವರಿ 2022, 19:21 IST
ಅಕ್ಷರ ಗಾತ್ರ

ಬೆಂಗಳೂರು: ‘ಜೋತ್ಸ್ನಾ ಕಾಮತ್ ಅವರ ‘ಕಲಕತ್ತಾ ದಿನಗಳು’ ಕೃತಿಯು ವಿಸ್ಮೃತಿಗೆ ಸರಿದುಹೋದ ಹಲವು ಘಟನೆಗಳು ಹಾಗೂ ಅತ್ಯಂತ ಧೀಮಂತ ವ್ಯಕ್ತಿಗಳನ್ನು ಜೀವಂತಗೊಳಿಸಿದೆ’ ಎಂದು ಸಾಹಿತಿ ನೇಮಿಚಂದ್ರ ಅಭಿಪ್ರಾಯಪಟ್ಟರು.

ಅಂಕಿತ ಪುಸ್ತಕ ಪ್ರಕಾಶನವು ಬುಕ್‌ ಬ್ರಹ್ಮ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.

‘ಜೋತ್ಸ್ನಾ ಅವರು ಕೊಲ್ಕತ್ತದ ಸ್ಮಶಾನಕ್ಕೆ ಭೇಟಿ ನೀಡಿ 18ನೇ ಶತಮಾನದ ಗೋರಿಗಳು ಹೇಳುವ ಕಥೆ
ಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ. ಒಂದೊಂದು ಕಥೆಯ ಹಿನ್ನೆಲೆಯನ್ನು ಚರಿತ್ರೆಯ ಪುಟಗಳಿಂದ ಹೆಕ್ಕಿ ಅವುಗಳಿಗೆ ಅಕ್ಷರ ರೂಪ ನೀಡಿದ್ದಾರೆ. 200 ವರ್ಷಗಳ ಹಿಂದೆ ಭಾರತವನ್ನು ಒಂದು ಕವನದ ರೂಪದಲ್ಲಿ ಬರೆದ ಆಂಗ್ಲೊ ಇಂಡಿಯನ್‌ ವ್ಯಕ್ತಿಯ ಕುರಿತ ಮಾಹಿತಿಯನ್ನೂ ಪುಸ್ತಕ ಒಳಗೊಂಡಿದೆ’ ಎಂದರು.

ವಿದ್ವಾಂಸ ಆರ್‌. ಶೇಷಶಾಸ್ತ್ರಿ, ‘ಕೊಲ್ಕತ್ತದಲ್ಲಿ ಸಿಗುವ ಸೀರೆಗಳು, ತಿಂಡಿ–ತಿನಿಸು‌, ಉಡುಗು–ತೊಡುಗೆ, ಸಂಸ್ಕೃತಿ ಹಾಗೂ ಅಲ್ಲಿನ ಗ್ರಾಮೀಣ ಪರಿಸರ ಹೀಗೆಎಲ್ಲದರ ಚಿತ್ರಣವನ್ನೂ ಈ ಪುಸ್ತಕದಲ್ಲಿ ಕಟ್ಟಿಕೊಡಲಾಗಿದೆ. ಹಾಗಂತ ಇದು ಪ್ರವಾಸ ಕಥನವಲ್ಲ’ ಎಂದು ಹೇಳಿದರು.

ಲೇಖಕಿ ಜೋತ್ಸ್ನಾ ಕಾಮತ್‌, ಅಂಕಿತ ಪುಸ್ತಕ ಪ್ರಕಾಶನದ ಪ್ರಕಾಶ್‌ ಕಂಬತ್ತಳ್ಳಿ ಹಾಗೂ ಪ್ರಭಾ ಕಂಬತ್ತಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT