ಗುರುವಾರ , ಡಿಸೆಂಬರ್ 8, 2022
18 °C

ಎ.ಸಿ ಘಟಕ ಕದ್ದು ಮಾರಾಟ: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹವಾನಿಯಂತ್ರಿತ (ಎ.ಸಿ) ಘಟಕ ಹಾಗೂ ನೀರಿನ ಮೋಟರ್ ಪಂಪ್ ಕಳ್ಳತನ ಮಾಡಿದ್ದ ಆರೋಪದಡಿ ಸೈಯದ್ ಸುಹೇಲ್ (28) ಎಂಬುವವರನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿ ಸುಹೇಲ್, ಮೋಟರ್ ಪಂಪ್ ದುರಸ್ತಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಸಂಬಳ ಸಾಲದಿದ್ದರಿಂದ ಹೆಚ್ಚು ಹಣ ಗಳಿಸಲು ಇತ್ತೀಚೆಗೆ ಕೃತ್ಯ ಎಸಗಿದ್ದ. ಈತನನ್ನು ಬಂಧಿಸಿ, ₹ 1.60 ಲಕ್ಷ ಮೌಲ್ಯದ ಎ.ಸಿ ಘಟಕ ಹಾಗೂ ಮೋಟರ್ ಪಂಪ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು