ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಎಸಿಬಿ!

ಎರಡನೇ ದಿನದ ದಾಳಿ
Last Updated 20 ನವೆಂಬರ್ 2021, 14:13 IST
ಅಕ್ಷರ ಗಾತ್ರ

ಬೆಂಗಳೂರು: ನಿವೇಶನ ಹಂಚಿಕೆ, ಭೂಸ್ವಾಧೀನ ಮತ್ತು ಜಮೀನು ಮಾಲೀಕರಿಗೆ ಪರಿಹಾರ ವಿತರಣೆಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆಯುತ್ತಿರುವ ದೂರುಗಳನ್ನು ಆಧರಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕೇಂದ್ರ ಕಚೇರಿ ಮೇಲೆ ಶುಕ್ರವಾರ ಸಂಜೆ ದಿಢೀರ್‌ ದಾಳಿಮಾಡಿ, ಶೋಧ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ), ನೂರಾರು ಕೋಟಿ ರೂಪಾಯಿ ಮೌಲ್ಯದ ಅಕ್ರಮಗಳನ್ನು ಪತ್ತೆಮಾಡಿತ್ತು.

ಶನಿವಾರವೂ ಕೂಡ ಎಸಿಬಿ ಅಧಿಕಾರಿಗಳು ಶೋಧ ಮುಂದುವರೆಸಿದ್ದು, ಡಿಎಸ್‌ 2 ಹಾಗೂ ಡಿಎಸ್ 4 ಕಚೇರಿಯಲ್ಲಿನ ತಪಾಸಣೆ ಬಹುತೇಕ ಅಂತ್ಯಗೊಂಡಿದೆ.ಇನ್ನೂ ಕೆಲವು ಕಡೆ ಶೋಧ ಮುಂದುವರೆದಿದೆ.

ಇಂದುಬಿ.ಡಿ.ಎ ಕಚೇರಿಯ ಎರಡನೇ ದಿನದ ಮುಂದುವರೆದ ದಾಳಿಯಲ್ಲಿ ಕಂಡು ಬಂದ ಹೆಚ್ಚುವರಿ ಅಕ್ರಮಗಳನ್ನು ಎಸಿಬಿ ಪತ್ರಿಕಾ ಪ್ರಕಟಣೆ ನೀಡಿ ವಿವರಿಸಿದೆ.

1. ಬಿ.ಡಿ.ಎ ಅರ್ಕಾವತಿ ಬಡಾವಣೆ, ಕೆಂಪೇಗೌಡ ಬಡಾವಣೆ ಹಾಗೂ ವಿಶ್ವೇಶ್ವರಯ್ಯ ಬಡಾವಣೆಗಳಲ್ಲಿಸುಮಾರು ₹75 ಕೋಟಿ ಬೆಲೆಬಾಳುವ 6 ನಿವೇಶನಗಳನ್ನು ಸುಳ್ಳು ಮಾಹಿತಿ ನೀಡಿ, ಖೊಟ್ಟಿದಾಖಲೆ ಸೃಷ್ಟಿಸಿ ಬಿ.ಡಿ.ಎ ಅಧಿಕಾರಿ ಮತ್ತು ಸಿಬ್ಬಂದಿಗಳು ಶಾಮಿಲಾಗಿ ಬೆಲೆಬಾಳುವನಿವೇಶನಗಳನ್ನು ಅನರ್ಹ ವ್ಯಕ್ತಿಯೊಬ್ಬರಿಗೆ ಸಿಗುವಂತೆ ನೀಡಲಾಗಿರುತ್ತದೆ. ಈ ಬಗ್ಗೆ ಮೂಲದಾಖಲೆಗಳನ್ನು ವಶ ಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಎಸಿಬಿ ತಿಳಿಸಿದೆ.

2.ಕೆಂಗೇರಿ ಹೋಬಳಿ ಉಳ್ಳಾಲ ಗ್ರಾಮದಲ್ಲಿ ಬಿ.ಡಿ.ಎ ಅಧಿಕಾರಿ ಮತ್ತು ಸಿಬ್ಬಂದಿಗಳು, ಖಾಸಗಿವ್ಯಕ್ತಿಮತ್ತುಮದ್ಯವರ್ತಿಗಳೊಂದಿಗೆಶಾಮೀಲಾಗಿ ಸದರಿ ವ್ಯಕ್ತಿಯಿಂದ ಯಾವುದೇ ಜಮೀನನ್ನು ಸ್ವಾದೀನಪಡಿಸಿಕೊಳ್ಳದೆ ಇದ್ದರು ಸಹ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಬದಲಿ ನಿವೇಶನವಾಗಿ1800 ಚ.ಅ ಅಳತೆಯ ಸುಮಾರು ₹1.5 ಕೋಟಿ ಮೌಲ್ಯದ ನಿವೇಶನವನ್ನು ಅಕ್ರಮವಾಗಿ ಮಂಜೂರು ಮಾಡಿರುತ್ತಾರೆ. ಈ ಬಗ್ಗೆ ಮೂಲ ದಾಖಲೆಗಳನ್ನು ವಶ ಪಡಿಸಿಕೊಂಡು ತನಿಖೆಮುಂದುವರಿಸಲಾಗಿದೆ ಎಂದು ಎಸಿಬಿ ತಿಳಿಸಿದೆ.

3. ಕೆಂಗೇರಿ ಸ್ಯಾಟ್‌ಲೈಟ್‌ ಟೌನ್ ಬಳಿ ಬಿ.ಡಿ.ಎ ಅಧಿಕಾರಿ ಮತ್ತು ಸಿಬ್ಬಂದಿಗಳು ಖಾಸಗಿ ವ್ಯಕ್ತಿ ಮತ್ತುಮದ್ಯವರ್ತಿಗಳೊಂದಿಗೆ ಶಾಮೀಲಾಗಿ ಖೊಟ್ಟಿ ದಾಖಲೆ ಹಾಜರುಪಡಿಸಿ 1000 ಚ.ಅಅಳತೆಯ ಸುಮಾರು ₹80 ಲಕ್ಷ ಮೌಲ್ಯದ ನಿವೇಶನವನ್ನು ಅಕ್ರಮವಾಗಿ ಮಂಜೂರುಮಾಡಿರುತ್ತಾರೆ. ಈ ಬಗ್ಗೆ ಮೂಲ ದಾಖಲಾತಿಗಳನ್ನು ವಶ ಪಡಿಸಿಕೊಂಡು ತನಿಖೆಮುಂದುವರಿಸಲಾಗಿದೆಎಂದು ಎಸಿಬಿ ತಿಳಿಸಿದೆ.

4. ಬೆಂಗಳೂರು ನಗರ ಚಂದ್ರಾ ಲೇಔಟ್‌ ಪ್ರದೇಶದಲ್ಲಿ ಬಿ.ಡಿ.ಎ ಅಧಿಕಾರಿ ಮತ್ತು ಸಿಬ್ಬಂದಿಗಳು ಖಾಸಗಿವ್ಯಕ್ತಿ ಮತ್ತು ಮದ್ಯವರ್ತಿಗಳೊಂದಿಗೆ ಶಾಮೀಲಾಗಿ ಖೊಟ್ಟಿ ದಾಖಲೆ ಹಾಜರುಪಡಿಸಿ ₹5 ಕೋಟಿ ಮೌಲ್ಯದ 2400 ಚ.ಅ ನಿವೇಶನವನ್ನು ಅಕ್ರಮವಾಗಿ ಮಂಜೂರು ಮಾಡಿರುತ್ತಾರೆಈ ಬಗ್ಗೆ ಮೂಲ ದಾಖಲೆಗಳನ್ನು ವಶ ಪಡಿಸಿಕೊಂಡು ತನಿಖೆ ಮುಂದುವರೆಸಿದೆಎಂದು ಎಸಿಬಿ ತಿಳಿಸಿದೆ.


5. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲ ನಿವೇಶನ ಫಲಾನುಭವಿಯವರ ಮೂಲದಾಖಲೆಗಳನ್ನು ತಿದ್ದುಪಡಿಗೊಳಿಸಿ ಬಿ.ಡಿ.ಎ ಅಧಿಕಾರಿ ಮತ್ತು ಸಿಬ್ಬಂದಿಗಳು ಖಾಸಗಿ ವ್ಯಕ್ತಿ ಮತ್ತುಮದ್ಯವರ್ತಿಗಳೊಂದಿಗೆ ಶಾಮೀಲಾಗಿ ಖೊಟ್ಟಿ ದಾಖಲೆಗಳನ್ನು ಹಾಜರುಪಡಿಸಿ ₹30 ಲಕ್ಷಬೆಲೆಬಾಳುವ ನಿವೇಶನವನ್ನು ಅಕ್ರಮವಾಗಿ ಅನರ್ಹ ವ್ಯಕ್ತಿಗೆ ಮಂಜೂರು ಮಾಡಿರುತ್ತಾರೆ. ಈ ಬಗ್ಗೆ ಮೂಲ ದಾಖಲೆಗಳನ್ನು ವಶ ಪಡಿಸಿಕೊಂಡು ತನಿಖೆ ಮುಂದುವರೆದಿದೆಎಂದು ಎಸಿಬಿ ತಿಳಿಸಿದೆ.

6. ಕೆಲವೊಂದು ಪ್ರಕರಣಗಳಲ್ಲಿ ಒಂದೇ ನಿವೇಶನವನ್ನು ಒಂದಕ್ಕಿಂತ ಹೆಚ್ಚಿನ ವ್ಯಕ್ತಿಗಳಿಗೆ ನೊಂದಣಿಮಾಡಿಕೊಟ್ಟು ಫಲಾನುಭವಿಗಳಿಗೆ ಅನವಶ್ಯಕವಾಗಿ ನ್ಯಾಯಾಲಯದ ಮಟ್ಟಿಲು ಏರುವಂತೆಮಾಡಿರುತ್ತಾರೆ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕಾಗಿರುತ್ತದೆ ಎಂದು ಎಸಿಬಿ ತಿಳಿಸಿದೆ.

7. ಬಿ.ಡಿ.ಎ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಮೂಲ ಫಲಾನುಭವಿಗಳಿಗೆ ಮಂಜೂರಾದ ₹52 ಲಕ್ಷಮೌಲ್ಯದ ನಿವೇಶನವನ್ನು ಅನರ್ಹ ವ್ಯಕ್ತಿಗೆ ನೀಡಲಾಗಿದೆ. ಈ ಬಗ್ಗೆ ಮೂಲ ದಾಖಲೆಗಳನ್ನು ವಶ ಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆಎಂದು ಎಸಿಬಿ ತಿಳಿಸಿದೆ.

8. ಅರ್ಕಾವತಿ ಬಡಾವಣೆಯಲ್ಲಿ ಫಲಾನುಭವಿಯೊಬ್ಬರಿಗೆ ನಿವೇಶನ ಮಂಜೂರಾಗಿದ್ದರು ಸಹಯಾವುದೇ ಕಾರಣ ಇಲ್ಲದೆ ದುರುದ್ದೇಶದಿಂದ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನವನ್ನುಮಂಜೂರು ಮಾಡಲಾಗಿರುತ್ತದೆ. ಈ ಬಗ್ಗೆ ಮೂಲ ದಾಖಲೆಗಳನ್ನು ವಶ ಪಡಿಸಿಕೊಂಡು ತನಿಖೆಮುಂದುವರೆಸಲಾಗಿದೆ.

9. ಬಿ.ಡಿ.ಎ ಭೂ-ಸ್ವಾಧೀನಕ್ಕೆ ಸಂಬಂಧಪಟ್ಟಂತೆ ಭೀಮನಕುಪ್ಪೆ ಗ್ರಾಮ, ನಾಡಪ್ರಭು ಕೆಂಪೇಗೌಡಬಡಾವಣೆ ಹಾಗೂ ಡಾ.ಕೆ.ಶಿವರಾಮಕಾರಂತ್ ಬಡಾವಣೆ ಮೊದಲಾದ ಕಡೆಗಳಲ್ಲಿ ಬಿ.ಡಿ.ಎಅಧಿಕಾರಿ ಮತ್ತು ಸಿಬ್ಬಂದಿಗಳು ಮಧ್ಯವರ್ತಿಗಳೊಂದಿಗೆ ಶ್ಯಾಮಿಲಾಗಿ ಹಲವಾರು ಅಕ್ರಮಗಳನ್ನುನಡೆಸಿರುವಂತೆ ಮೇಲ್ನೋಟಕ್ಕೆ ಕಂಡು ಬಂದಿದ್ದು ಈ ಬಗ್ಗೆ ದೊಡ್ಡ ಸಂಖ್ಯೆಯಲ್ಲಿ ದಾಖಲಾತಿಗಳನ್ನುಮತ್ತು ನೊಂದಣಿ ವಹಿಗಳನ್ನು ಅಮಾನತುಪಡಿಸಿಕೊಳ್ಳಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ
ನಡೆಸಲಾಗುವುದುಎಂದು ಎಸಿಬಿ ತಿಳಿಸಿದೆ.

10. ಬಿ.ಡಿ.ಎ ಭೂ-ಸ್ವಾದೀನಕ್ಕೆ ಸಂಬಂಧಪಟ್ಟಂತೆ ಸರ್ಕಾರಿ ಜಮೀನುಗಳನ್ನು ಖಾಸಗಿ ವ್ಯಕ್ತಿಗಳ ಮಾಲಿಕತ್ವ ಹೊಂದಿರುವಂತೆ ಅಕ್ರಮ ದಾಖಲೆಗಳನ್ನು ಸೃಷ್ಟಿಸಿ ಬಿ.ಡಿ.ಎ ಅಧಿಕಾರಿ ಮತ್ತುಸಿಬ್ಬಂದಿಗಳು ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಕೊಟ್ಯಂತರ ರೂ ಮೌಲ್ಯದ ಪರಿಹಾರಧನವನ್ನು ಖಾಸಗಿ ವ್ಯಕ್ತಿಗಳಿಗೆ ನೀಡಲಾಗಿದೆಎಂದು ಎಸಿಬಿ ತಿಳಿಸಿದೆ.

11. ಬಿ.ಡಿ.ಎ ಅಂಜನಾಪುರ ಬಡಾವಣೆಯಲ್ಲಿ ಫಲಾನುಭವಿಗೆ ಸೇರಿದ ನಿವೇಶನ ಒಂದುಒತ್ತುವರಿಯಾಗಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸುವ ಬದಲಾಗಿ ಸದರಿಯವರಿಗೆ ಬೇರೆ ಬಡಾವಣೆಯಲ್ಲಿ ನಿವೇಶನವನ್ನು ನೀಡಿ ಸದರಿ ನಿವೇಶನವನ್ನು ಸಹ ಇತರೆ ಮೂರನೇ ವ್ಯಕ್ತಿಗೆಮಂಜೂರು ಮಾಡಿ ಅಕ್ರಮ ಮಾಡಲಾಗಿದೆ. ಈ ಬಗ್ಗೆ ಮೂಲ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆಎಂದು ಎಸಿಬಿ ತಿಳಿಸಿದೆ.

12. ಅರ್ಕಾವತಿ ಬಡಾವಣೆ ಮತ್ತು ಇನ್ನು ಕೆಲವು ಬಡಾವಣೆಗಳಲ್ಲಿ, ಕೆಲವು ಅರ್ಜಿದಾರರು ನಿವೇಶನಮಂಜೂರಾತಿ ಪಡೆದು ನಿಗಧಿತ ಸಮಯದಲ್ಲಿ ಹಣ ಸಂದಾಯ ಮಾಡಿದ್ದರು ಸಹ ಅವರಿಗೆ ಲೀಸ್ಕಂ ಸೇಲ್‌ ಡೀಡ್ ಗಳನ್ನು ಮಾಡಿ ನಿಗಧಿತ ಅವಧಿಯೊಳಗೆ ಮನೆಗಳನ್ನುಕಟ್ಟಿಕೊಂಡಿದ್ದರು ಸಹ ಸದರಿಯವರಿಗೆ ಅಬ್ಸ್ ಲ್ಯೂಟ್ ಸೇಲ್‌ ಡೀಡ್ (ಎ.ಎಸ್.ಡಿ)ಗಳನ್ನು ಮಾಡಿ ಕೊಡದೆ ದುರುದ್ದೇಶದಿಂದ ಅನಗತ್ಯ ವಿಳಂಬ ನೀತಿಯನ್ನು ಅನುಸರಿಸಿ ತೊಂದರೆ ಕೊಡಲಾಗಿದೆ.ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆಎಂದು ಎಸಿಬಿ ತಿಳಿಸಿದೆ.

13. ಇದೇ ರೀತಿ ನಿಗಧಿತ ಅವಧಿಯೊಳಗೆ ಬಿ.ಡಿ.ಎ ನಿಗಧಿ ಪಡಿಸಿರುವ ಹಣವನ್ನು ಸಂದಾಯ ಮಾಡಿದಅರ್ಜಿದಾರರಿಗೆ ನಿವೇಶನ ಹಂಚಿಕೆ ಪತ್ರ ನೀಡದೆ ಅನವ್ಯಶಕ ವಿಳಂಭ ನೀತಿ ಅನುಸರಿಸಲಾಗಿದ್ದುಈ ಬಗ್ಗೆ ತನಿಖೆ ನಡೆಸಲಾಗುತ್ತಿದೆಎಂದು ಎಸಿಬಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT