ಎಸಿಬಿ ಬಲೆಗೆ ಆರೋಗ್ಯಾಧಿಕಾರಿ
ಬೆಂಗಳೂರು: ನೈಸರ್ಗಿಕ ಆಹಾರ ಉತ್ಪನ್ನ ತಯಾರಿಕೆಗಾಗಿ ಎಣ್ಣಿ ಗಿರಣಿ ಆರಂಭಿಸಲು ಅನುಮತಿ ನೀಡಲು ಲಂಚ ಪಡೆಯುತ್ತಿದ್ದ ಬಿಬಿಎಂಪಿ ಹಿರಿಯ ಆರೋಗ್ಯ ಅಧಿಕಾರಿ ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಟಿ. ದಾಸರಹಳ್ಳಿ ವಲಯದ ಆರೋಗ್ಯ ಅಧಿಕಾರಿ ವಿ.ಆರ್. ಪ್ರವೀಣ್‌ಕುಮಾರ್ ಅವರನ್ನು ಬಂಧಿಸಿರುವ ಎಸಿಬಿ ಅಧಿಕಾರಿಗಳು, ಲಂಚದ ಹಣ ವಶಕ್ಕೆ ಪಡೆದಿದ್ದಾರೆ. ಅನುಮತಿ ನೀಡಲು ₹12 ಸಾವಿರ ಲಂಚ ಕೇಳಿದ್ದ ಇವರು, ಮುಂಗಡವಾಗಿ ₹7 ಸಾವಿರ ಪಡೆಯುವಾಗ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.