ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರೊ ಇಂಡಿಯಾ: ‘ಆತ್ಮನಿರ್ಭರ ವಿಮಾನಗಳ’ ಆಕರ್ಷಣೆ

ದೇಶೀಯ ವಿಮಾನಗಳ ಸಾಮರ್ಥ್ಯ ಪ್ರದರ್ಶನಕ್ಕೆ ವಿಶೇಷ ವೇದಿಕೆ
Last Updated 29 ಜನವರಿ 2021, 18:53 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ ಏರೊ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ‘ಆತ್ಮನಿರ್ಭರ ಭಾರತದ ವಿಮಾನಗಳು’ ಆಕರ್ಷಣೆಯ ಕೇಂದ್ರ ಬಿಂದುಗಳಾಗಲಿವೆ. ಅಂದರೆ, ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿರುವ ವಿಮಾನಗಳ ಪ್ರದರ್ಶನಕ್ಕೆ ಹಿಂದೂಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್‌ (ಎಚ್‌ಎಎಲ್‌) ಯೋಜಿಸಿದೆ.

ಯಲಹಂಕ ವಾಯುನೆಲೆಯಲ್ಲಿ ಫೆ.3ರಿಂದ 5ರವರೆಗೆ ನಡೆಯಲಿರುವ ‘ಏರೊ ಇಂಡಿಯಾ’ದಲ್ಲಿ ‘ಪರಿಕಲ್ಪನೆ, ಸ್ಥಳೀಯವಾಗಿ ಅಭಿವೃದ್ಧಿ, ಸಹಯೋಗ’ ಘೋಷವಾಕ್ಯದಡಿ ಈ ವಿಮಾನಗಳು ಪ್ರದರ್ಶನ ನೀಡಲಿವೆ.

ಎಚ್‌ಎಎಲ್‌ ನಿರ್ಮಿಸಿರುವ ಸುಖೊಯ್‌ ಎಸ್‌ಯು–3ಒ ಎಂಕೆಐ, ಸುಧಾರಿತ ಲಘು ಹೆಲಿಕಾಪ್ಟರ್‌ (ಎಎಲ್‌ಎಚ್‌) ಧ್ರುವ, ಲಘುಯುದ್ಧ ಹೆಲಿಕಾಪ್ಟರ್‌ಗಳು ದೇಶೀಯ ವಿಮಾನಗಳ ಪಟ್ಟಿಯಲ್ಲಿವೆ.

ನಿರ್ದಿಷ್ಟ ಉದ್ದೇಶ ಈಡೇರಿಕೆಗೆ ಯುದ್ಧವಿಮಾನಗಳು ಕಾರ್ಯನಿರ್ವಹಿಸುವ ವ್ಯವಸ್ಥೆಯನ್ನು (ಸಿಎಟಿಎಸ್‌) ಎಚ್‌ಎಎಲ್‌ ರೂಪಿಸಿದ್ದು, ಅದರ ಕುರಿತೂ ಪ್ರದರ್ಶನ ಇರಲಿದೆ. ತೇಜಸ್‌ ಯುದ್ಧವಿಮಾನವೂ ಈ ವ್ಯವಸ್ಥೆಯಲ್ಲಿ ಪ್ರದರ್ಶನ ನೀಡಲಿದೆ. ಈ ತಂತ್ರಜ್ಞಾನದ ಸಮಗ್ರ ಪ್ರದರ್ಶನ ಮತ್ತು ವಿಮಾನ ನಿರ್ಮಾಣದಲ್ಲಿನ ಸ್ವಾವಲಂಬನೆಯ ದರ್ಶನವನ್ನು ಎಚ್‌ಎಎಲ್‌ ಮಾಡಲಿದೆ.

‘ಏರ್‌ ಷೋದಲ್ಲಿ ಕಂಪನಿಯು ಪ್ರಮುಖ ಘೋಷಣೆಗಳನ್ನು ಮಾಡಲಿದೆ. ಇದಲ್ಲದೆ, ಹೊಸ ಉತ್ಪನ್ನಗಳ ಬಿಡುಗಡೆ ಮತ್ತು ಅವುಗಳ ಹಸ್ತಾಂತರ ಪ್ರಕ್ರಿಯೆಗೂ ಏರ್‌ ಷೋ ಸಾಕ್ಷಿಯಾಗಲಿದೆ’ ಎಂದು ಎಚ್‌ಎಎಲ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT