ಬೆಂಗಳೂರು: ‘ಸಿವಿಲ್ ಎಂಜಿನಿಯರಿಂಗ್ನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಬಳಕೆ ಅಗತ್ಯವಾಗಿದ್ದು, ಚಂದ್ರ ಮತ್ತು ಮಂಗಳ ಗ್ರಹದ ಮೇಲಿನ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಪ್ರಾಮುಖ್ಯ ಹೊಂದಿದೆ’ ಎಂದು ಅಮೆರಿಕದ ಇನ್ಸ್ಟಿಟ್ಯೂಟ್ ಆಫ್ ಹಜಾರ್ಡ್ ಮೆಟೀರಿಯಲ್ಸ್ ಮ್ಯಾನೇಜ್ಮೆಂಟ್ನ (ಐಎಚ್ಎಂಎಂ) ಡಾ. ರಾಬರ್ಟ್ ಎ. ವೆಸ್ಟ್ ಅಭಿಪ್ರಾಯಪಟ್ಟರು.

ದಯಾನಂದ ಸಾಗರ ಕಾಲೇಜ್ ಆಫ್ ಎಂಜಿನಿಯರಿಂಗ್ನ ಸಿವಿಲ್ ಎಂಜಿನಿಯರಿಂಗ್ ವಿಭಾಗ, ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ (ಇಂಡಿಯಾ– ಐಇಐ), ಇಂಡಿಯನ್ ಕಾಂಕ್ರೀಟ್ ಇನ್ಸ್ಟಿಟ್ಯೂಟ್ ಮತ್ತು ಬೆಂಗಳೂರು ಜಲಮಂಡಳಿ ಸಹಯೋಗದೊಂದಿಗೆ ‘ಇನೊವೇಶನ್ ಇನ್ ಸಸ್ಟೈನಬಲ್ ಆ್ಯಂಡ್ ಡಿಜಿಟಲ್ ಕನ್ಸ್ಟ್ರಕ್ಷನ್ ಪ್ರಾಕ್ಟೀಸಸ್’ ಎಂಬ ಎರಡನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಎಚ್. ಕೆ. ರಾಮರಾಜು ಮಾತನಾಡಿ, ‘ಡಿಜಿಟಲ್ ತಂತ್ರಜ್ಞಾನಗಳು ನಿರ್ಮಾಣ ಕ್ಷೇತ್ರದ ಭವಿಷ್ಯ ರೂಪಿಸುವಲ್ಲಿ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪುವುದರಲ್ಲಿ ವಹಿಸುವ ಪಾತ್ರಗಳ’ನ್ನು ಬಿಚ್ಚಿಟ್ಟರು.

ಅಮೆರಿಕದ ಎಕ್ಸ್ಕಿಲೆನ್ಸ್ ಸಂಸ್ಥೆಯ ಸಿಇಒ ಡಾ. ಎಸ್. ಆರ್. ಸುಬ್ರಹ್ಮಣ್ಯ, ಫ್ಲಾರಿಡಾ ಇಂಟರ್ನ್ಯಾಷನಲ್ ಯೂನಿವರ್ಸಿಟಿಯ ಡಾ. ಇನೆಸ್ ಆರ್. ಟ್ರೈಯ್, ಲಾಸ್ ವೇಗಾಸ್ನ ನಿಯೋಗದ ಮುಖ್ಯಸ್ಥ ಡಾ. ರಾಂಪುರ ವಿ. ವಿವಿಧ ವಿಷಯಗಳ ಕುರಿತು ಮಾತನಾಡಿದರು. ದಯಾನಂದ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಜಿ. ಪ್ರಸಾದ್ ಉಪಸ್ಥಿತರಿದ್ದರು.

ಈ ಸಮ್ಮೇಳನಕ್ಕೆ ವಿಶ್ವದಾದ್ಯಂತ ಒಟ್ಟು 300 ಪ್ರಬಂಧಗಳು ಬಂದಿದ್ದು, ಅವುಗಳಲ್ಲಿ 165 ಪ್ರಬಂಧಗಳನ್ನು ಪ್ರಸ್ತುತಪಡಿಸಲು ಆಯ್ಕೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.