ಬೆಂಗಳೂರಿನಲ್ಲಿ ವಾಯುಪಡೆ ನೇಮಕಾತಿ ರ‍್ಯಾಲಿ

ಬೆಂಗಳೂರು: ಭಾರತೀಯ ವಾಯುಪಡೆಯು ನಗರದಲ್ಲಿ ನೇಮಕಾತಿ ರ‍್ಯಾಲಿ ನಡೆಸಲಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಸೆ.8ರಿಂದ 11ರವರೆಗೆ ನೋಂದಣಿ ಮಾಡಿಕೊಳ್ಳಬೇಕು.
ರಾಜ್ಯದ ಅಭ್ಯರ್ಥಿಗಳಿಗಾಗಿಯೇ ಸೆ.23ರಿಂದ ಅ.4ರವರೆಗೆ ಈ ನೇಮಕಾತಿ ರ‍್ಯಾಲಿಯನ್ನು ವಾಯುಪಡೆ ನಡೆಸಲಿದೆ. ‘ಎಕ್ಸ್’ ದರ್ಜೆಯ ಏರ್‌ಮನ್ ಹುದ್ದೆಗೆ ನೇಮಕಾತಿ ನಡೆಯಲಿದೆ. 2000ನೇ ಇಸ್ವಿಯ ಜ.17ರಿಂದ 2003ರ ಡಿ.31ರ ಅವಧಿಯಲ್ಲಿ ಜನಿಸಿದ ಪುರುಷ ಅವಿವಾಹಿತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
ದ್ವಿತೀಯ ಪಿಯು ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆ ಹೊಂದಿರಬೇಕು. ಗಣಿತ, ಭೌತವಿಜ್ಞಾನ ಮತ್ತು ಇಂಗ್ಲಿಷ್‌ನಲ್ಲಿ ಶೇ 50ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು. ಎಂಜಿನಿಯರಿಂಗ್ ಮೆಕಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಟೊಮೊಬೈಲ್, ಕಂಪ್ಯೂಟರ್ ಸೈನ್ಸ್‌ನಲ್ಲಿ 3 ವರ್ಷದ ಡಿಪ್ಲೊಮಾ ಕೋರ್ಸ್ ಪೂರ್ಣಗೊಳಿಸಿದವರೂ ಅರ್ಜಿ ಸಲ್ಲಿಸಬಹುದು. ಅಂಕಪಟ್ಟಿ ಮತ್ತು ಇತರೆ ಅಗತ್ಯದಾಖಲೆಗಳ 30 ನಕಲು ಪ್ರತಿಗಳು ಮತ್ತು ಭಾವಚಿತ್ರದೊಂದಿಗೆ ನೇಮಕಾತಿ ರ‍್ಯಾಲಿಗೆ ಹಾಜರಾಗಬೇಕು.
ಅರ್ಹ ಅಭ್ಯರ್ಥಿಗಳು www.airmenselection.cdac.in ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಮಾಹಿತಿಗೆ ಏರ್‌ಮನ್ ಸೆಲಕ್ಷನ್ ಸೆಂಟರ್, ಕಬ್ಬನ್ ರಸ್ತೆ, ಬೆಂಗಳೂರು–560001 ಅಥವಾ ದೂರವಾಣಿ 080-25592199 ಸಂಪರ್ಕಿಸಬಹುದು. ಇ–ಮೇಲ್ ವಿಳಾಸ co.7asc-ka@gov.in
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.