ಬೆಂಗಳೂರು: ಭಾರತೀಯ ವಾಯುಪಡೆ ತರಬೇತಿ ಕಮಾಂಡ್ನ ‘ವಾಯುಪಡೆ ಕಮಾಂಡಿಂಗ್-ಇನ್-ಚೀಫ್’ (ಎಒಸಿ-ಇನ್-ಸಿ) ಆಗಿ ಏರ್ ಮಾರ್ಷಲ್ ಶ್ರೀನಿವಾಸ್ ಗುರುವಾರ ಅಧಿಕಾರ ವಹಿಸಿಕೊಂಡರು.

ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿರುವ ಏರ್ ಮಾರ್ಷಲ್ ಶ್ರೀನಿವಾಸ್ ಅವರನ್ನು 1987ರಲ್ಲಿ ಐಎಎಫ್ನ ಫೈಟರ್ ವಿಭಾಗದಲ್ಲಿ ನಿಯೋಜಿಸಲಾಗಿತ್ತು. ಮಿಗ್-21, ಇಸ್ಕ್ರಾ, ಕಿರಣ್, ಪಿಸಿ-7 ಎಂಕೆ II, ಎಚ್ಪಿಟಿ-32, ಮೈಕ್ರೋಲೈಟ್ ಸೇರಿದಂತೆ ವಿವಿಧ ವಿಮಾನಗಳಲ್ಲಿ 4,200 ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ. ‘ಎ’ ಶ್ರೇಣಿಯ ಫ್ಲೈಯಿಂಗ್ ಬೋಧಕರಾಗಿದ್ದು, ಚೇತಕ್/ಚೀತಾ ಹೆಲಿಕಾಪ್ಟರ್ನಲ್ಲಿ 2ನೇ ಪೈಲಟ್ ಮತ್ತು ಪೆಚೋರಾ ಕ್ಷಿಪಣಿ ವ್ಯವಸ್ಥೆಯಲ್ಲಿ ಕಾರ್ಯಾಚರಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ವಾಯುಪಡೆ ಅಕಾಡೆಮಿಯ ಕಮಾಂಡೆಂಟ್, ಪಶ್ಚಿಮ ಗಡಿಯಲ್ಲಿರುವ ಫೈಟರ್ ಬೇಸ್ನ ಏರ್ ಆಫೀಸರ್ ಕಮಾಂಡಿಂಗ್ ಮತ್ತು ಪ್ರಮುಖ ಫ್ಲೈಯಿಂಗ್ ತರಬೇತಿ ನೆಲೆ. ಎಒಸಿ ಅಡ್ವಾನ್ಸ್ ಎಚ್ಕ್ಯೂ ವೆಸ್ಟರ್ನ್ ಏರ್ ಕಮಾಂಡ್ (ಜೈಪುರ), ಫ್ಲೈಯಿಂಗ್ ಇನ್ಸ್ಟ್ರಕ್ಟರ್ಸ್ ಸ್ಕೂಲ್ನ ಕಮಾಂಡಿಂಗ್ ಆಫೀಸರ್, ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಸೇಫ್ಟಿ ಮತ್ತು ಸಿಒ ಕಮಾಂಡೆಂಟ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಧಾನ ಕಚೇರಿ ಎಸ್ಡಬ್ಲ್ಯುಎಸಿಯಲ್ಲಿ ಹಿರಿಯ ಅಧಿಕಾರಿಯಾಗಿದ್ದ ಅವರನ್ನು ಈಗ ಕಮಾಂಡಿಂಗ್-ಇನ್-ಚೀಫ್ ಮಾಡಲಾಗಿದೆ.

ಶ್ರೀನಿವಾಸ್ ಅವರ ಅತ್ಯುತ್ತಮ ಸೇವೆಯನ್ನು ಗುರುತಿಸಿ 2017ರಲ್ಲಿ ವಿಶಿಷ್ಟ ಸೇವಾ ಪದಕ ಮತ್ತು 2024 ರಲ್ಲಿ ಅತಿ ವಿಶಿಷ್ಟ ಸೇವಾ ಪದಕವನ್ನು ನೀಡಿ ರಾಷ್ಟ್ರಪತಿಯವರು ಗೌರವಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.