ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಡೇಟಿಂಗ್ ಆ್ಯಪ್’ ಸ್ನೇಹ: ಗಗನಸಖಿ ಸಾವು

ಫಾಲೋ ಮಾಡಿ
Comments

ಬೆಂಗಳೂರು: ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದ ಗೆಳೆಯನನ್ನು ಭೇಟಿಯಾಗಲು ಬಂದಿದ್ದ ಗಗನ ಸಖಿ ಅರ್ಚನಾ ಧಿಮಾನ್ (28)ಎಂಬುವವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಹಿಮಾಚಲ ಪ್ರದೇಶದ ಅರ್ಚನಾ ಧಿಮಾನ್, ದುಬೈನಲ್ಲಿ ವಿಮಾನದ ಗಗನಸಖಿ ಆಗಿ ಕೆಲಸ ಮಾಡುತ್ತಿದ್ದರು. ಡೇಟಿಂಗ್ ಆ್ಯಪ್ ಗೆಳೆಯ ಆದೇಶ್ ವಾಸವಿದ್ದ ಕೋರಮಂಗಲ 8ನೇ ಹಂತದಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ 4ನೇ ಮಹಡಿ ಯಿಂದ ಶುಕ್ರವಾರ ರಾತ್ರಿ ಬಿದ್ದಿದ್ದರು. ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ನಸುಕಿನಲ್ಲಿ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಅರ್ಚನಾ ಅವರದ್ದು ಆತ್ಮಹತ್ಯೆ ಇರಬಹುದೆಂದು ಮೇಲ್ನೋಟಕ್ಕೆ ಗೊತ್ತಾದರೂ, ಆದೇಶ್ ತಳ್ಳಿರಬಹುದೆಂಬ ಶಂಕೆಯೂ ಇದೆ. ಆಸ್ಪತ್ರೆಯಲ್ಲಿ ಮೃತದೇಹವಿದ್ದು, ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ’ ಎಂದು ತಿಳಿಸಿದರು.

ರಡು ಬಾರಿ ಭೇಟಿ: ‘ಮಂಗಳೂರಿನ ಆದೇಶ್, ನಗರದ ಕಂಪನಿಯೊಂದರಲ್ಲಿ ಆಪ್ತ ಸಮಾಲೋಚಕ ಕೆಲಸ ಮಾಡುತ್ತಿದ್ದಾರೆ. 2021ರ ಜೂನ್‌ನಲ್ಲಿ ಡೇಟಿಂಗ್ ಆ್ಯಪ್ ಮೂಲಕ ಆದೇಶ್ ಹಾಗೂ ಅರ್ಚನಾ ಪರಿಚಯವಾಗಿದ್ದರು. ಇಬ್ಬರೂ ಪ್ರೀತಿಸುತ್ತಿದ್ದರೆಂಬ ಮಾಹಿತಿ ಇದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಎರಡು ಬಾರಿ ನಗರಕ್ಕೆ ಬಂದು ಹೋಗಿದ್ದ ಅರ್ಚನಾ, ಆದೇಶ್ ವಾಸವಿದ್ದ ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟ್‌ನಲ್ಲಿಯೇ ನೆಲೆಸಿದ್ದರು. ಶುಕ್ರವಾರವೂ (ಮಾರ್ಚ್ 10) ಆದೇಶ್ ಫ್ಲ್ಯಾಟ್‌ನಲ್ಲಿಯೇ ಉಳಿದುಕೊಂಡಿದ್ದರು. ಸಂಜೆ ಸಿನಿಮಾ ನೋಡಲು ಹೋಗಿದ್ದ ಇಬ್ಬರು, ರಾತ್ರಿ ವಾಪಸು ಬಂದು ಫ್ಲ್ಯಾಟ್‌ನಲ್ಲಿ ಪಾರ್ಟಿ ಮಾಡಿದ್ದರು. ಆಗ ಇಬ್ಬರ ನಡುವೆ ಜಗಳವಾಗಿರುವ ಅನುಮಾನವಿದೆ’.

‘ರಾತ್ರಿ 12 ಗಂಟೆ ಸುಮಾರಿಗೆ ಫ್ಲ್ಯಾಟ್‌ನಿಂದ ಹೊರಗೆ ಬಂದಿದ್ದ ಅರ್ಚನಾ, ಮಹಡಿಯಿಂದ ಬಿದ್ದಿದ್ದಾರೆ. ಈ ವೇಳೆ ಆದೇಶ್, ಫ್ಲ್ಯಾಟ್‌ನಲ್ಲಿದ್ದರೆಂದು ಗೊತ್ತಾಗಿದೆ. ಘಟನೆ ಸಂಬಂಧ ಆದೇಶ್ ವಿಚಾರಣೆ ನಡೆಸಬೇಕಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT