ಬೆಂಗಳೂರು: ವಿಶ್ವ ಪರಿಸರ ದಿನ ನಿಮಿತ್ತ ಇಲ್ಲಿನ ವಿಮೊವ್ ಫೌಂಡೇಶನ್ ‘ಆಲ್ಟರ್ನೆಟಿವ್ 24’ ಶೀರ್ಷಿಕೆಯಡಿ ಪರಿಸರ ಸಂರಕ್ಷಣೆ ಕುರಿತು ಏರ್ಪಡಿಸಿದ್ದ ವಿಡಿಯೊ ರೀಲ್ಸ್ ಸ್ಪರ್ಧೆ ಫಲಿತಾಂಶ ಘೋಷಣೆ ಸಮಾರಂಭ ಜೂನ್ 1ರಂದು ಬೆಳಿಗ್ಗೆ 10ಕ್ಕೆ ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ನಡೆಯಲಿದೆ.

‘ಯೂತ್ ಫಾರ್ ಗ್ರೀನ್ ಆ್ಯಂಡ್ ವೈಬ್ರಂಟ್ ಬೆಂಗಳೂರು’ ಪರಿಕಲ್ಪನೆಯಡಿ ‘ಆಲ್ಟರ್ನೆಟಿವ್ 24’ ಹಮ್ಮಿಕೊಳ್ಳಲಾಗಿದೆ. ನಗರದ ಕಾಲೇಜುಗಳ ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, 30 ವರ್ಷದೊಳಗಿನವರು ಏಕವ್ಯಕ್ತಿಯಾಗಿ ಅಥವಾ ಗುಂಪಾಗಿ ಈ ರೀಲ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.

ಜಲ ಸಂರಕ್ಷಣೆ, ಹಸಿರು ತಾಣದ ಅಗತ್ಯ, ತ್ಯಾಜ್ಯ ನಿರ್ವಹಣೆ, ಸಾಗಣೆ ಕ್ರಮಗಳಲ್ಲಿ ಬದಲಾವಣೆ ಹಾಗೂ ಹಸಿರು ಇಂಧನ ಪರಿಹಾರ ಕುರಿತು ರೀಲ್ಸ್ ಮಾಡಲು ಅವಕಾಶವಿತ್ತು. ಇದೇ ವೇಳೆ ವಿವಿಧ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದೆ.

ತಜ್ಞರ ಸಮಿತಿ ಪ್ರತಿ ವಿಭಾಗದಲ್ಲಿ ಮೂರು ವಿಡಿಯೊ ರೀಲ್ಸ್ ಆಯ್ಕೆ ಮಾಡುತ್ತದೆ. ಪರಿಸರ ರಕ್ಷಣೆಯ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿತ್ತು ಎಂದು ಫೌಂಡೇಶನ್‌ನ ಸಂಸ್ಥಾಪಕ ವಿನಯ್ ಶಿಂಧೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.