ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಡೆಮಿಗಳಿಗೆ ಸದಸ್ಯರ ನೇಮಕ: ಅಧಿಸೂಚನೆ ಹೊರಡಿಸಿದ ಸರ್ಕಾರ

Last Updated 2 ಜುಲೈ 2020, 21:24 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಸಾಂಸ್ಕೃತಿಕ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳ‌ ಕಾರ್ಯಕಾರಿ ಸಮಿತಿ ಅಪೂರ್ಣವಾಗಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಿಗದಿತ ಸದಸ್ಯರನ್ನು ನೇಮಕ ಮಾಡಿದೆ.

ಕಳೆದ ವರ್ಷ ಅ.15ರಂದು ಸರ್ಕಾರ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಿತ್ತು. ಆದರೆ, ಪೂರ್ಣ ಪ್ರಮಾಣದ ಕಾರ್ಯಕಾರಿ ಸಮಿತಿ ರಚನೆ ಆಗಿರಲಿಲ್ಲ. ಈಗ ಅಗತ್ಯ ಇರುವ ಸದಸ್ಯರನ್ನು ಸೇರ್ಪಡೆ ಮಾಡಲಾಗಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ: ಡಾ.ಕಿಶೋರ್ (ಬೆಂಗಳೂರು)

ಕರ್ನಾಟಕ ಲಲಿತಕಲಾ ಅಕಾಡೆಮಿ: ರಾಘವೇಂದ್ರ (ಬೆಂಗಳೂರು), ಲ. ಅಶೋಕ (ಬಳ್ಳಾರಿ), ವೀರೇಶ ರುದ್ರಸ್ವಾಮಿ (ಬಾಗಲಕೋಟೆ), ಮಹದೇವ ದಂಡಿನ (ಚಾಮರಾಜನಗರ), ಶ್ರೀಕಾಂತ ರಾಜ್ (ಬೆಂಗಳೂರು ಗ್ರಾಮಾಂತರ), ಡಾ.ಸೌಮ್ಯ ಮಂಜುನಾಥ (ಬೆಂಗಳೂರು)

ಜಾನಪದ ಅಕಾಡೆಮಿ: ಸಿ.ಎಂ.ನರಸಿಂಹಮೂರ್ತಿ (ಚಾಮರಾಜನಗರ), ಜೋಗಿಲ ಸಿದ್ದರಾಜು (ರಾಮನಗರ), ಡಾ.ನಾರಾಯಣಪ್ಪ (ಸಿಂಧನೂರು), ಶಿಲ್ಪ ಮುಡಬಿ (ಬೆಳಗಾವಿ) ಹಾಗೂ ಮಹಾರುದ್ರಪ್ಪ ವೀರಪ್ಪ ಇಟಗಿ (ಹಿರೇಕೆರೂರು) ಅವರು ಸದಸ್ಯರಾಗಿ ನೇಮಕರಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರು:

ಕರ್ನಾಟಕಸಾಹಿತ್ಯ ಅಕಾಡೆಮಿ: ನಲ್ಲತಂಬಿ (ಮೈಸೂರು), ದತ್ತಗುರು ಹೆಗಡೆ (ಉತ್ತರ ಕನ್ನಡ), ಮಡಿವಾಳಪ್ಪ ಮುಳಚಂಡಿ (ಕಲಬುರ್ಗಿ), ವನಜಾ (ಬೆಂಗಳೂರು), ಬಸವರಾಜ ಜಗಜಂಪಿ (ಬೆಳಗಾವಿ), ದೀಪ್ತಿ (ಶಿವಮೊಗ್ಗ), ಡಾ.ಪ್ರಸನ್ನ ಕುಮಾರ್ (ತುಮಕೂರು).

ಕರ್ನಾಟಕ ನಾಟಕ ಅಕಾಡೆಮಿ: ಬಿಸ್ಲೆಹಳ್ಳಿ ಸೋಮಶೇಖರ್ (ಚಿಕ್ಕಮಗಳೂರು), ಎ.ಪಿ.ಸೂರನಾಯಕ್ (ಬೆಳಗಾವಿ),
ಕೂರ್ಗಿ ಶಂಕರನಾರಾಯಣ ಉಪಾಧ್ಯಾಯ (ಉತ್ತರ ಕನ್ನಡ), ರಾಚಪ್ಪ ಬಡಿಗೇರ (ಬಾಗಲಕೋಟೆ)

ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿ: ಡಾ. ಶೋಭಾ ಶಶಿಕುಮಾರ (ಬೆಂಗಳೂರು), ಸಿ.ಕೆ.ಅಂಜಲಿ ಸೆಟ್ಟಿ (ಶಿವಮೊಗ್ಗ), ಸೌಮ್ಯಶ್ರೀ (ಹಾಸನ), ನಾಗೇಶ ಹೆಬ್ಬಾಳೆ (ಬೆಂಗಳೂರು) ಹಾಗೂ ಸ್ಮೃತಿ ಹರಿತ್ಸ (ಬೆಂಗಳೂರು)

ಅರೆಭಾಷೆ ಸಾಹಿತ್ಯ-ಸಂಸ್ಕೃತಿ ಅಕಾಡೆಮಿ: ಡಾ.ದಯಾನಂದ ಕೆ.ಸಿ (ಮಡಿಕೇರಿ), ಕುಸುಮಾಧರ ಎ.ಟಿ (ದಕ್ಷಿಣ ಕನ್ನಡ), ಡಾ.ವಿಶ್ವನಾಥ ಬದಿಕಾನ (ದಕ್ಷಿಣ ಕನ್ನಡ), ಜಯಪ್ರಕಾಶ್ ಮೋಂಟಡ್ಕ (ದಕ್ಷಿಣ ಕನ್ನಡ), ಪುರುಷೋತ್ತಮ ಕಿರ್ಲಾಯ (ದಕ್ಷಿಣ ಕನ್ನಡ), ಭಾರತಿ ರಮೇಶ್ (ಕೊಡಗು).

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ: ರವಿ ಪಿ.ಎಂ (ಮಡಿಕೇರಿ), ನರೇಂದ್ರ ಕೆರೆಕಾಡು (ಮುಲ್ಕಿ), ಸರ್ವೋತ್ತಮ ಶೆಟ್ಟಿ (ದುಬೈ), ಸಂತೋಷಕುಮಾರ್ (ಬೆಳ್ತಂಗಡಿ), ಕಲಾವತಿ (ಉಡುಪಿ).

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ: ಯತೀಂದ್ರನಾಥ (ಶಿವಮೊಗ್ಗ) ಹಾಗೂ ಪ್ರೊ. ರಾಘವೇಂದ್ರ ಪಾಟೀಲ (ಧಾರವಾಡ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT