ಭಾನುವಾರ, ಮೇ 29, 2022
23 °C

‘ಅಂಬರ್‌ಗ್ರಿಸ್’ ಅಕ್ರಮ ಸಾಗಣೆ ಇಬ್ಬರು ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತಿಮಿಂಗಿಲದವಾಂತಿಯನ್ನು (ಅಂಬಗ್ರಿಸ್) ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿಗಳಾದ ರಿಯಾಜ್ ಅಹ್ಮದ್ ಹಾಗೂ ಮೊಹಮ್ಮದ್ ಗೌಸ್ ಬಂಧಿತರು. ಅವರಿಂದ ಸುಮಾರು ₹ 3 ಕೋಟಿ ಮೌಲ್ಯದ ಅಂಬಗ್ರಿಸ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಹೊರ ರಾಜ್ಯದಲ್ಲಿ ಅಂಬಗ್ರಿಸ್ ಖರೀದಿಸಿ ನಗರಕ್ಕೆ ತಂದಿದ್ದ ಆರೋಪಿಗಳು, ಮಾರಾಟ ಮಾಡಲು ಯತ್ನಿಸುತ್ತಿದ್ದರು.‘

‘ಬನಶಂಕರಿ ಬಳಿ ಆರೋಪಿ ಗಳು ಅನುಮಾನಾಸ್ಪದವಾಗಿ ನಿಂತಿದ್ದರು. ಅವರ ಬಗ್ಗೆ ಸ್ಥಳೀ ಯರು ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋದ ಪೊಲೀಸ್ ಸಿಬ್ಬಂದಿ, ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದಿದ್ದರು. ವಿಚಾ ರಣೆ ನಡೆಸಿದಾಗ, ಆರೋಪಿಗಳ ಬಳಿ ಅಂಬಗ್ರಿಸ್ ಇರುವುದು ತಿಳಿ ಯಿತು’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.