ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಹಶೀಲ್ದಾರ್ ಅಜಿತ್ ಕುಮಾರ್ ವಿರುದ್ಧ ಬಂಧನ ವಾರೆಂಟ್

Last Updated 6 ಏಪ್ರಿಲ್ 2021, 22:18 IST
ಅಕ್ಷರ ಗಾತ್ರ

ಕೆ.ಆರ್.ಪುರ: ದೇವಸ್ಥಾನದ ಜಾಗ ಕಬಳಿಕೆ ಸಂಬಂಧ ವರದಿ ಸಲ್ಲಿಸದ ಬೆಂಗಳೂರು ಪೂರ್ವ ತಾಲ್ಲೂಕು ತಹಶೀಲ್ದಾರ್ ಅಜಿತ್ ಕುಮಾರ್‌ ಅವರಿಗೆ 25,000 ಸಾವಿರ ದಂಡ ವಿಧಿಸಿರುವ ಕರ್ನಾಟಕ ಭೂ ಕಬಳಿಕ ನಿಷೇಧ ವಿಶೇಷ ನ್ಯಾಯಾಲಯವು ಜಾಮೀನು ಸಹಿತ ಬಂಧನ ವಾರೆಂಟ್ ಹೊರಡಿಸಿದೆ.

ಬಿದರಹಳ್ಳಿ ಹೋಬಳಿಯ ಬೆಳತ್ತೂರು ಗ್ರಾಮದಲ್ಲಿ ಚೌಡೇಶ್ವರಿ ದೇವಾಲಯದ ಸರ್ವೇ 57 ರಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ 2 ಎಕರೆ 26 ಗುಂಟೆ ಸರ್ಕಾರಿ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಒತ್ತುವರಿ ಮಾಡಿ ನಲವತ್ತಕ್ಕೂ ಹೆಚ್ಚು ಐಷಾರಾಮಿ ಬಂಗಲೆ, ‌ವಿಲ್ಲಾ, ಜಿಮ್, ಕ್ಲಬ್, ಈಜುಕೊಳ ಇತರೆ ಅಕ್ರಮ ಕಟ್ಟಡಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿತ್ತು. ಈ ವೇಳೆ ಬಾಳಪ್ಪ ಹಂದಿಗುಂದತಹಶೀಲ್ಡಾರ್‌ ಆಗಿದ್ದರು.

ಈ ಸಂಬಂಧ ಜಿಲ್ಲಾಧಿಕಾರಿಗಳ ಮುಖಾಂತರ ನೋಟಿಸ್ ನೀಡಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ವರದಿ ನೀಡುವಂತೆ ನ್ಯಾಯಾಲಯದ ನಿರ್ದೇಶನ ನೀಡಿದ್ದರೂ ತಹಶೀಲ್ದಾರ್ ಅಜಿತ್ ಕುಮಾರ್ ವರದಿ ಸಲ್ಲಿಸಿಲ್ಲ. ಈ ಕಾರಣಕ್ಕೆ ಏಪ್ರಿಲ್ 27 ರಂದು ಬೆಳಿಗ್ಗೆ 11 ಗಂಟೆಗೆ ಖುದ್ದು ಹಾಜರಾಗುವಂತೆ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಆದೇಶ ಹೊರಡಿಸಿ ಕೆ.ಆರ್.ಪುರ ಠಾಣಾಧಿಕಾರಿಗೆ ರವಾನಿಸಿದೆ.

’ಈ ಹಿಂದೆ ದೇವಸ್ಥಾನ ಜಾಗ ಜಾತ್ರೆ ಸಮಯದಲ್ಲಿ ಪಲ್ಲಕಿ ನಿಲ್ಲಿಸಲು, ಸರ್ಕಾರಿ ಕಾರ್ಯಕ್ರಮ ಮಾಡಲು ಬಳಕೆ ಆಗುತ್ತಿತ್ತು. ನಾರಾಯಣಸ್ವಾಮಿ, ಲೋಕೇಶ್, ರಂಜಿತ್ ರೆಡ್ಡಿ ಸೇರಿದಂತೆ 63 ಕಬಳಿಕೆ ಮಾಡಿದವರ ಮೇಲೆ ದೂರು ನೀಡಲಾಗಿತ್ತು. ಅಜಿತ್ ಕುಮಾರ್ ಅವರಿಗೆ ನ್ಯಾಯಾಲಯವು ಮೂರು ಸಾರಿ ನೋಟಿಸ್ ನೀಡಿದರೂ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಒತ್ತುವರಿದಾರರ ಜೊತೆ ತಹಶೀಲ್ದಾರ್ ಶಾಮಿಲಾಗಿದ್ದಾರೆ‘ ಎಂದು ದೂರುದಾರ ಬೆಳತ್ತೂರು ಪರಮೇಶ್ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT