ಗ್ರಾಹಕನ ಮೇಲೆ ಹಲ್ಲೆ: ಬಾರ್ ಸಿಬ್ಬಂದಿ ಬಂಧನ

ಬೆಂಗಳೂರು: ಮಂಜುನಾಥ್ ನಗರದಲ್ಲಿರುವ ವೆಂಕಟಗಿರಿ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಗ್ರಾಹಕ ಪೆರುಮಾಳ್ (25) ಎಂಬುವರ ಮೇಲೆ ಹಲ್ಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಬಾರ್ ವ್ಯವಸ್ಥಾಪಕ ಸೇರಿ ಮೂವರನ್ನು ಪೊಲಿಸರು ಬಂಧಿಸಿದ್ದಾರೆ.
ವ್ಯವಸ್ಥಾಪಕ ಗಿರೀಶ್, ಸಪ್ಲೈಯರ್‌ಗಳಾದ ಗಣೇಶ್ ಹಾಗೂ ಬೀರಪ್ಪ ಬಂಧಿತರು.
‘ಪೀಣ್ಯದ ಕೈಗಾರಿಕೆಯೊಂದರ ಉದ್ಯೋಗಿ ಪೆರುಮಾಳ್, ಮದ್ಯ ಕುಡಿಯಲು
ಶನಿವಾರ ತಡರಾತ್ರಿ ಬಾರ್‌ಗೆ ಹೋಗಿದ್ದರು. ಮದ್ಯ ಖರೀದಿಸಿ ಕೌಂಟರ್ ಎದುರು ನಿಂತು ಕುಡಿಯುತ್ತಿದ್ದರು. ಅಷ್ಟಕ್ಕೆ ಜಗಳ ತೆಗೆದಿದ್ದ ಸಿಬ್ಬಂದಿ, ಹಲ್ಲೆ ಮಾಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಪೆರುಮಾಳ್ ತಲೆ, ಮುಖಕ್ಕೆ ಗಾಯವಾಗಿದೆ. ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದೂ ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.