ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂದೆ ಹೋಗಲು ಜಾಗ ಬಿಡದಿರುವುದಕ್ಕೆ ಜಗಳ: ಶಾಲಾ ವಾಹನ ಅಡಗಟ್ಟಿ ಚಾಲಕನ ಮೇಲೆ ಹಲ್ಲೆ

Published : 17 ಸೆಪ್ಟೆಂಬರ್ 2024, 15:50 IST
Last Updated : 17 ಸೆಪ್ಟೆಂಬರ್ 2024, 15:50 IST
ಫಾಲೋ ಮಾಡಿ
Comments

ಬೆಂಗಳೂರು: ಮುಂದೆ ಹೋಗಲು ಜಾಗ ಬಿಡಲಿಲ್ಲವೆಂಬ ಕಾರಣಕ್ಕೆ ಸ್ಕಾರ್ಪಿಯೊ ವಾಹನದ ಚಾಲಕ ಮತ್ತು ಆತನ ಸ್ಮೇಹಿತರು ಶಾಲಾ ಬಸ್​ ಅಡ್ಡಗಟ್ಟಿ, ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯ ಮಾರಗೊಂಡನಹಳ್ಳಿಯಲ್ಲಿ ಸೋಮವಾರ ನಡೆದಿದೆ.

ಟರ್ಮಿಶ್‌ ಶಾಲೆಯ ಬಸ್‌ ಚಾಲಕ ಜೇಮ್ಸ್ ಧೋನ್ ಅವರು ಘಟನೆ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು,  ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

‘ತರಗತಿ ಮುಗಿದ ಬಳಿಕ ಮಕ್ಕಳನ್ನು ಮನೆಗೆ ಬಿಡಲು ಶಾಲಾ ಬಸ್‌ನಲ್ಲಿ ಕರೆದೊಯ್ಯಲಾಗುತ್ತಿತ್ತು. ಆಗ ಹಿಂದಿನಿಂದ ಬಂದ ವಾಹನ ಚಾಲಕ ಮುಂದೆ ಹೋಗಲು ದಾರಿ ಬಿಡುವಂತೆ ಹಾರ್ನ್ ಮಾಡಿದರೂ ಬಸ್ ಚಾಲಕ ಅವಕಾಶ ನೀಡಲಿಲ್ಲ. ಸ್ಕಾರ್ಪಿಯೊ ವಾಹನದಲ್ಲಿ ಬಂದ ಆರು ಜನರು ವಿ.ಆರ್.ಆರ್‌.ಕನ್ವೇಷನ್ ಹಾಲ್ ಬಳಿ ಶಾಲಾ ಬಸ್‌ ಅನ್ನು ಅಡ್ಡಗಟ್ಟಿದರು. ಚಾಲಕ ಜೇಮ್ಸ್‌ ಧೋನ್‌ನನ್ನು ಕೆಳಗಿಳಿಸಿ, ಹಲ್ಲೆ ನಡೆಸಿದ್ದಾರೆ. ಅಲ್ಲದೇ ಬಸ್​ ಕಿಟಕಿಯ ಗಾಜು ಒಡೆದು ಹಾಕಿದ್ದಾರೆ. ಈ ವೇಳೆ ಶಾಲಾ ಬಸ್​ನಲ್ಲಿದ್ದ ಮಕ್ಕಳು ಹೆದರಿ ಕಿರುಚಾಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT