ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶ್ವತ್‌ನಾರಾಯಣ, ಭಾನುಮತಿಗೆ ಕಸಾಪ ವಿದ್ವತ್‌ ದತ್ತಿ ಪ್ರಶಸ್ತಿ

Aswatnarayana, Bhanumathi Vidwat Datti Award
Published 13 ಜೂನ್ 2023, 20:51 IST
Last Updated 13 ಜೂನ್ 2023, 20:51 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾಷಾ ಶಾಸ್ತ್ರಜ್ಞರಿಗಾಗಿ ಮೀಸಲಿಟ್ಟಿರುವ ಟಿ.ವಿ. ವೆಂಕಟಾಚಲ ಶಾಸ್ತ್ರಿ ವಿದ್ವತ್‌ ದತ್ತಿ ಪ್ರಶಸ್ತಿಗೆ ಜಿ. ಅಶ್ವತ್ಥನಾರಾಯಣ ಹಾಗೂ ವೈ.ಸಿ. ಭಾನುಮತಿ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ₹ 10 ಸಾವಿರ ನಗದು, ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ. ಕೋವಿಡ್‌ ಕಾರಣಕ್ಕೆ ಎರಡು ವರ್ಷ ಪ್ರಶಸ್ತಿ ನೀಡಿರಲಿಲ್ಲ. 2022ನೇ ಸಾಲಿನ ಪ್ರಶಸ್ತಿಗೆ ಭಾಷಾಶಾಸ್ತ್ರಜ್ಞೆ ಮೈಸೂರಿನ ವೈ.ಸಿ. ಭಾನುಮತಿ ಹಾಗೂ ʻ2023ನೇ ಸಾಲಿನ ಪ್ರಶಸ್ತಿಗೆ ಭಾಷಾಶಾಸ್ತ್ರಜ್ಞ ಜಿ. ಅಶ್ವತ್‌ ನಾರಾಯಣ ಅವರನ್ನು ಸಮಿತಿ ಆಯ್ಕೆಮಾಡಿದೆ ಎಂದು ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.

ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ಟಿ.ವಿ.ವೆಂಕಟಾಚಲಶಾಸ್ತ್ರಿ ಅವರ ಮಗಳು ಟಿ.ವಿ. ಚಿತ್ಕಲಾ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿ, ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷ ಬಿ.ಎಂ. ಪಟೇಲ್ ಪಾಂಡು ಇದ್ದರು.

ಜಿ. ಅಶ್ವತ್ಥನಾರಾಯಣ
ಜಿ. ಅಶ್ವತ್ಥನಾರಾಯಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT