ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೌಡಿಶೀಟರ್ ಮೇಲೆ ಹಲ್ಲೆ: 9 ಮಂದಿ ಬಂಧನ

Published 24 ಆಗಸ್ಟ್ 2024, 15:40 IST
Last Updated 24 ಆಗಸ್ಟ್ 2024, 15:40 IST
ಅಕ್ಷರ ಗಾತ್ರ

ಬೆಂಗಳೂರು: ಹಣದ ವಿಚಾರಕ್ಕೆ ರೌಡಿಶೀಟರ್ ಮೇಲೆ ಹಲ್ಲೆ ನಡೆಸಿದ್ದ 9 ಮಂದಿ ಆರೋಪಿಗಳನ್ನು ಕೊಡಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ವಿಜಯ್ ಕುಮಾರ್ ಎಂಬಾತನ ಮೇಲೆ ಆಗಸ್ಟ್ 21ರಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದ ಆರೋಪದಡಿ ಮುತ್ತು, ನಂದ, ಕಿರಣ್, ಶಿವ, ಮಾರುತಿ, ಸುನಿಲ್‌, ಶರತ್, ರಿತು ಹಾಗೂ ಮೂರ್ತಿ ಎಂಬುವವರನ್ನು ಬಂಧಿಸಲಾಗಿದೆ.

ಮುತ್ತು ಬಳಿ ₹5 ಸಾವಿರ ರೂಪಾಯಿ ಹಣ ಪಡೆದಿದುಕೊಂಡಿದ್ದ ವಿಜಯ್, ಹಣ ಹಿಂದಿರುಗಿಸಿರಲಿಲ್ಲ. ಇತ್ತೀಚೆಗೆ ಬಡಾವಣೆಯಲ್ಲಿ ಅಣ್ಣಮ್ಮ ದೇವಿ ಮೂರ್ತಿ ಪ್ರತಿಷ್ಠಾಪಿಸುವ ವೇಳೆ, ಹಣ ವಾಪಸ್ ಕೊಡುವಂತೆ ಎಲ್ಲರ ಎದುರು ಮುತ್ತು ಕೇಳಿದ್ದ. ಸಾರ್ವಜನಿಕವಾಗಿ ಹಣ ಕೇಳಿದ್ದನ್ನು ಅವಮಾನವೆಂದು ಭಾವಿಸಿದ್ದ ವಿಜಯ್, ಮುತ್ತು ಜೊತೆ ಜಗಳ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಇಬ್ಬರ ನಡುವೆ ಸಂಧಾನದ ಕುರಿತು ಚರ್ಚೆಯಾಗಿತ್ತು. ಬೆಳಿಗ್ಗೆ 5 ಗಂಟೆಗೆ ವಿಜಯ್ ವಾಯುವಿಹಾರ ಮಾಡುತ್ತಿದ್ದ ವೇಳೆ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಸದ್ಯ, ವಿಜಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT