ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

2020ರವರೆಗೆ 2 ಸ್ಟ್ರೋಕ್‌ಆಟೊಗಳಿಗೆ ಅರ್ಹತಾ ಪತ್ರ

Published : 19 ನವೆಂಬರ್ 2018, 19:43 IST
ಫಾಲೋ ಮಾಡಿ
Comments

ಬೆಂಗಳೂರು: ನಗರದಲ್ಲಿ ಎಲ್‌ಪಿಜಿಯಿಂದ ಸಂಚರಿಸುವ 2 ಸ್ಟ್ರೋಕ್‌ ಆಟೊರಿಕ್ಷಾಗಳಿಗೆ ಅರ್ಹತಾ ಪ್ರಮಾಣಪತ್ರವನ್ನು 2020ರ ಮಾರ್ಚ್‌ವರೆಗೆ ನೀಡಲು ಸಾರಿಗೆ ಇಲಾಖೆ ನಿರ್ಧರಿಸಿದೆ.

ನಗರದಲ್ಲಿ ಏ.1ರಿಂದ 2 ಸ್ಟ್ರೋಕ್‌ ಆಟೊರಿಕ್ಷಾಗಳನ್ನು ರದ್ದುಗೊಳಿಸಲು ಇಲಾಖೆ ಆದೇಶ ಹೊರಡಿಸಿತ್ತು. ಹಳೆಯ ಆಟೊರಿಕ್ಷಾಗಳನ್ನು ರದ್ದು ಮಾಡಿ (ಗುಜರಿಗೆ ಹಾಕಿ) 4 ಸ್ಟ್ರೋಕ್‌ನ ಆಟೊಗಳನ್ನು ಖರೀದಿಸಲು ₹ 30 ಸಾವಿರ ಸಹಾಯಧನ ನೀಡುವ ಯೋಜನೆಯನ್ನು ಇಲಾಖೆ ಹಮ್ಮಿಕೊಂಡಿತ್ತು.

ಆದರೆ, ಹಳೆಯ ಆಟೋಗಳನ್ನು ರದ್ದುಗೊಳಿಸುವ ಕ್ರಮಕ್ಕೆ ಆಟೊಚಾಲಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮಾತ್ರವಲ್ಲ ಸಹಾಯಧನ ಏನೇನೂ ಸಾಲದು. ಅದನ್ನು ₹30 ಸಾವಿರಕ್ಕೆ ಏರಿಸಬೇಕು ಎಂದೂ ಒತ್ತಾಯಿಸಿದ್ದರು. ಈ ನಡುವೆ 2016–17ರಲ್ಲಿ 999 ಆಟೊ ರಿಕ್ಷಾಗಳನ್ನು ರದ್ದುಗೊಳಿಸಲಾಗಿತ್ತು. ಆ ಬಳಿಕ ಯಾರೂ ಈ ರಿಕ್ಷಾಗಳನ್ನು ರದ್ದುಗೊಳಿಸಲು ಮುಂದಾಗಿರಲಿಲ್ಲ. ಸಹಾಯಧನ ಯೋಜನೆ ರದ್ದಾಗಿತ್ತು. ನಗರದಲ್ಲಿ 26,954ರಷ್ಟು 2 ಸ್ಟ್ರೋಕ್‌ ಆಟೊರಿಕ್ಷಾಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT