ಬೆಂಗಳೂರು: ನೇತ್ರದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಇದೇ 25ರಿಂದ ಸೆ.8ರವರೆಗೆ ‘39ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ’ ಎಂದು ಘೋಷಿಸಿದೆ.
ಈ ಅವಧಿಯಲ್ಲಿ ಲಯನ್ಸ್ ಅಂತರರಾಷ್ಟ್ರೀಯ ನೇತ್ರ ಬ್ಯಾಂಕ್ ಜನರಲ್ಲಿ ನೇತ್ರದಾನದ ಅಗತ್ಯತೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ.
‘ಕಾರ್ನಿಯಲ್’ ಅಂಧತ್ವದಿಂದ ಮಕ್ಕಳು ಮತ್ತು ಯುವಕರು ಇಡೀ ಬದುಕನ್ನು ಕತ್ತಲೆಯಲ್ಲಿ ಕಳೆಯುವ ಸಂದರ್ಭಗಳಿವೆ. ಕಸಿ ಮಾಡುವ ಮೂಲಕ ಈ ಅಂಧತ್ವವನ್ನು ನಿವಾರಿಸಬಹುದು. ಹೀಗಾಗಿ, ಶವಸಂಸ್ಕಾರದ ಸಂದರ್ಭದಲ್ಲಿ ಕಣ್ಣುಗಳನ್ನು ಸುಡುವ ಬದಲು ಅಥವಾ ಮಣ್ಣಿನಲ್ಲಿ ಹೂಳುವ ಬದಲು ದಾನ ಮಾಡಬಹುದು ಎಂದು ನೇತ್ರ ಬ್ಯಾಂಕ್‌ನ ವ್ಯವಸ್ಥಾಪಕ ಟ್ರಸ್ಟಿ ಲಯನ್ ಪಿ.ಎಸ್. ಪ್ರೇಮನಾಥ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ www.lionsinternationaleyebankbangalore.in ವೆಬ್‌ಸೈಟ್ ವೀಕ್ಷಿಸಬಹುದು.
ಸಂಪರ್ಕಿಸಿ: 9740556666.