ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಕೆರೆ, ಉದ್ಯಾನಗಳಲ್ಲಿ 19 ಸಾವಿರ ಗಿಡ ನೆಡಲು ಬಿಬಿಎಂಪಿ ಕಾರ್ಯಕ್ರಮ

ಸಸಿ ನೆಡಲು ನಾಗರಿಕರಿಗೆ ಆಹ್ವಾನ
Published 4 ಆಗಸ್ಟ್ 2024, 0:00 IST
Last Updated 4 ಆಗಸ್ಟ್ 2024, 0:00 IST
ಅಕ್ಷರ ಗಾತ್ರ

ಬೆಂಗಳೂರು: ಕೆರೆಗಳು, ಉದ್ಯಾನಗಳಲ್ಲಿ 19 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಬಿಬಿಎಂಪಿ ಆಯೋಜಿಸಿದ್ದು, ನಾಗರಿಕರು ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ.

ಬಿಬಿಎಂಪಿ ಅರಣ್ಯ ವಿಭಾಗದ ವತಿಯಿಂದ, ಆಗಸ್ಟ್‌ 6ರಿಂದ 12ರವರೆಗೆ 19,850 ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ. ವೃಕ್ಷ ಕವಚಗಳನ್ನು ಒದಗಿಸಿ ಗಿಡ ನೆಡಲು ವ್ಯವಸ್ಥೆ ಮಾಡಲಾಗುತ್ತದೆ. ಸಾರ್ವಜನಿಕರು ಮಕ್ಕಳ ಜೊತೆಗೂಡಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಿಸರ ಕಾಳಜಿಯನ್ನು ಉತ್ತೇಜಿಸಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಬಿ.ಎಲ್‌.ಜಿ. ಸ್ವಾಮಿ ಹೇಳಿದ್ವಾರೆ.

ಹಸಿರು ರಕ್ಷಕ ತಂತ್ರಾಂಶದ (https://bit.ly/friendsofcac) ಮೂಲಕ ನೋಂದಾಯಿಸಿಕೊಂಡು ಗಿಡಗಳ ಪೋಷಣೆಗೆ ನಿರಂತರವಾಗಿ ಪಾಲ್ಗೊಳ್ಳಬಹುದಾಗಿದೆ. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಶೈಕ್ಷಣಿಕ ಸಂಸ್ಥೆಗಳು, ಲೇಕ್ ಗ್ರೂಪ್ಸ್, ಸಾರ್ವಜನಿಕರು ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಯಲಹಂಕ ವಲಯದಲ್ಲಿ 5,450, ಮಹದೇವಪುರದಲ್ಲಿ 4,800, ಬೊಮ್ಮನಹಳ್ಳಿಯಲ್ಲಿ 4,000, ಆರ್.ಆರ್. ನಗರದಲ್ಲಿ 1,600, ದಾಸರಹಳ್ಳಿ ವಲಯದಲ್ಲಿ 4,000 ಸಸಿಗಳನ್ನು ನೆಡಲಾಗುತ್ತದೆ. ಆಸಕ್ತರು ಆಯಾ ವಲಯ ಅರಣ್ಯ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT