ಶುಕ್ರವಾರ, ಜನವರಿ 17, 2020
22 °C
ಪೌರತ್ವ ಕಾಯ್ದೆ ಪರ ಬಲ ಪ್ರದರ್ಶನ

ಸಿಎಎ–ಎನ್‌ಆರ್‌ಸಿ ಸಂಯೋಜನೆ ಇಲ್ಲ: ಸಂಸದ ತೇಜಸ್ವಿ ಸೂರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ನೂರಾರು ಮಂದಿ ಟೌನ್‌ಹಾಲ್‌ ಎದುರು ಭಾನುವಾರ ಘೋಷಣೆಗಳನ್ನು ಕೂಗಿದರು. ಕಾಯ್ದೆ ವಿರೋಧಿಸುತ್ತಿರುವವ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ‘ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ ಸಂಯೋಜನೆ ಮಾಡುವುದಿಲ್ಲ’ ಎಂದು ನುಡಿದರು.

‘ನಾವು 5 ಶತಕೋಟಿ ರೂಪಾಯಿಯ ಅರ್ಥವ್ಯವಸ್ಥೆ ರೂಪಿಸುವ ಪ್ರಯತ್ನದಲ್ಲಿದ್ದೇವೆ. ನೀವು ಇಷ್ಟು ವರ್ಷ ಪ್ರತಿಪಾದಿಸಿದ ದುರ್ಬಲ ಜಾತ್ಯತೀತ ಪರಿಕಲ್ಪನೆ ಅರ್ಥ ಕಳೆದುಕೊಳ್ಳಲಿದೆ’ ಎಂದು ಹೇಳಿದರು.

ಆರಂಭದಲ್ಲಿ ಸುಮಾರು 250 ಮಂದಿ ಸೇರಿದ್ದರು. ಸಂಖ್ಯೆ ಕ್ರಮೇಣ ಹೆಚ್ಚಾಯಿತು. ವಿವಿಧ ಘೋಷಣೆಗಳ ಜೊತೆಗೆ ‘ಮೋದಿ’ ‘ಮೋದಿ’ ಎಂದು ಅವರು ಕೂಗುತ್ತಿದ್ದಾರೆ. ‘ಪೌರತ್ವ ತಿದ್ದುಪಡಿ ಕಾಯ್ದೆಯು ಜಾತ್ಯತೀತವಾಗಿದೆ. ಭಾರತವನ್ನು ಜಾತ್ಯತೀತ ಮೂಲಭೂತವಾದಿಗಳಿಂದ ಕಾಪಾಡಬೇಕಿದೆ’ ಎಂದು ಅವರು ತಂದಿರುವ ಭಿತ್ತಿಪತ್ರಗಳು ಹೇಳುತ್ತಿವೆ.

‘ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಕಾಯ್ದೆಗಳು ಪ್ರತ್ಯೇಕವಾದವುಗಳು. ಈ ಕಾಯ್ದೆಗಳಿಂದ ಭಾರತೀಯ ನಾಗರಿಕರಿಗೆ ಯಾವುದೇ ತೊಂದರೆಯಿಲ್ಲ. ಹಿಂದೂ ಅಥವಾ ಮುಸ್ಲಿಮರಿಗೆ ಈ ಕಾಯ್ದೆಗಳಿಂದ ಬಾಧಕವಿಲ್ಲ’ ಎಂದು ಕೆಲವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

 

 

 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು