ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ನೈಜೀರಿಯಾ ಬಾಲಕನಿಗೆ ಜನನಾಂಗ ಯಶಸ್ವಿ ಮರುಜೋಡಣೆ

Last Updated 2 ಜನವರಿ 2023, 14:27 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆ ಅಪಘಾತದಲ್ಲಿ ಜನನಾಂಗ ಕಳೆದುಕೊಂಡಿದ್ದ ನೈಜೀರಿಯಾ ಮೂಲದ 12 ವರ್ಷದ ಬಾಲಕನಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ‘ಸಂಕೀರ್ಣ ಶಸ್ತ್ರಚಿಕಿತ್ಸೆ’ ಮೂಲಕ ಜನನಾಂಗವನ್ನು ಮರುಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದೆ.

ಮೂತ್ರವಿಜ್ಞಾನ, ಯುರೋ-ಆಂಕಾಲಜಿ ವಿಭಾಗದ ನಿರ್ದೇಶಕರಾದ ಡಾ. ಮೋಹನ್ ಕೇಶವಮೂರ್ತಿ ಮತ್ತು ತಂಡ ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.

‘ಆರು ವರ್ಷಗಳ ಹಿಂದೆಯೇ ರಸ್ತೆ ಅಪಘಾತದಲ್ಲಿ ಬಾಲಕನ ಶಿಶ್ನ ಹಾಗೂ ಬಲ ವೃಷಣ ಸಂಪೂರ್ಣ ಕತ್ತರಿಸಿಕೊಂಡಿತ್ತು. ಅಂದಿನಿಂದ ಬಾಲಕ ಸರಿಯಾಗಿ ಮೂತ್ರ ವಿಸರ್ಜಿಸಲು ಸಾಧ್ಯವಾಗದೆ, ಕ್ಯಾತಿಟರ್ ಅಳವಡಿಸಿ ಪ್ಲಾಸ್ಲಿಕ್‌ ಚೀಲವನ್ನು ಮೂತ್ರ ಶೇಖರಣೆಗಾಗಿ ಹಾಕಲಾಗಿತ್ತು. ಅದೂ ಅಲ್ಲದೇ, ಅಪಘಾತದಿಂದ ಮೂತ್ರಕೋಶವು ದುರ್ಬಲವಾಗಿದ್ದರಿಂದ ಹೆಚ್ಚು ಸಮಯ ಮೂತ್ರವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಡಾ. ಮೋಹನ್‌ ಕೇಶವಮೂರ್ತಿ ವಿವರಿಸಿದರು.

‘ಈ ಬಾಲಕ ಫೊರ್ಟಿಸ್‌ ಆಸ್ಪತ್ರೆಗೆ ದಾಖಲಾದ ಬಳಿಕ, ತಪಾಸಣೆಗೆ ಒಳಪಡಿಸಲಾಯಿತು. ಬಾಲಕನಿಗೆ ಸದ್ಯ ಎರಡು ಹಂತಗಳ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮೂರನೇ ಹಂತದಲ್ಲಿ ಮೂತ್ರನಾಳದ ಪುನರ್‌ನಿರ್ಮಾಣ ಮಾಡುವ ಅವಶ್ಯಕತೆ ಇದ್ದು, ಆರು ತಿಂಗಳ ನಂತರ ಅದಕ್ಕಾಗಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಬಾಲಕ ವಯಸ್ಕನಾದ ನಂತರ ಸಂಭೋಗಕ್ಕೆ ತೊಡಕು ಆಗದಂತೆ ಎಚ್ಚರಿಕೆ ವಹಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪ್ರಸ್ತುತ ಬಾಲಕನ ಶಿಶ್ನವನ್ನು ಯಶಸ್ವಿಯಾಗಿ ಜೋಡಣೆ ಮಾಡಲಾಗಿದ್ದು, ಆರೋಗ್ಯವಾಗಿದ್ದಾನೆ. ಎಲ್ಲರಂತೆಯೇ ಶಿಶ್ನದ ಮೂಲಕ ಮೂತ್ರವಿಸರ್ಜನೆ ಮಾಡಬಹುದಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT