ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಆವರಿಸಿದ ದಟ್ಟ ಮೋಡಗಳು; ಸುರಿದ ಮಳೆಗೆ ತಣ್ಣಗಾದ ಮನಸು

Last Updated 24 ಏಪ್ರಿಲ್ 2020, 6:22 IST
ಅಕ್ಷರ ಗಾತ್ರ

ಬೆಂಗಳೂರು: ಗುರುವಾರ ಸಂಜೆಯಿಂದ ಮನೆಯಲ್ಲಿ ಸುಮ್ಮನೆ ಕುಳಿತಿದ್ದರೂ ಬೆವರು ಸುರಿಸುವಂತೆ ಮಾಡಿದ್ದ ವಾತಾವರಣದಲ್ಲಿ ಇಂದು ಮುಂಜಾವಿನಿಂದಲೇ ತಂಪಿನ ಸಿಂಚನವಾಗಿದೆ. ಕಳೆದರೂ ಆವರಿಸಿದ ದಟ್ಟ ಮೋಡಗಳಿಂದಾಗಿ ಬೆಳಿಗ್ಗೆ 7 ಕಳೆದರೂ ಮಬ್ಬು ಮಬ್ಬು....ಒಮ್ಮೆಲೆ ಬೀಸಿದ ತಂಗಾಳಿಯ ಹಿಂದೆಯೇ ಆಗಸದಲ್ಲೆಲ್ಲ ಸಿಡಿಲು–ಗುಡುಗಿನ ಆರ್ಭಟ. ಕೊರೊನಾ ಸೋಂಕಿನ ವಿಚಾರಗಳನ್ನೇ ಮಿಡಿಯುತ್ತಿರುವ ಮನಸ್ಸುಗಳಿಗೆ ಒಂದಷ್ಟು ಚೇತರಿಕೆ ನೀಡಿತು ಶುಕ್ರವಾರದ ಮಳೆ.

ಬೆಳಿಗ್ಗೆ ಸುರಿದ ಮಳೆಯನ್ನು ಕಣ್ತುಂಬಿಕೊಳ್ಳಲು ಕಿಟಕಿ, ಬಾಗಿಲುಗಳಿಂದ ಇಣುಕುತ್ತ ಫೋಟೊ, ವಿಡಿಯೊಗಳನ್ನು ಸೆರೆಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದೂ ಆಗಿದೆ. ವಾಟ್ಸ್ಆ್ಯಪ್‌ ಸ್ಟೇಟಸ್‌ಗಳಲ್ಲಿ ಅದಾಗಲೇ ಮಳೆಯ ಜೊತೆಯಲ್ಲಿರುವ ಚಿತ್ರಗಳ ಸಂಚಾರ ಶುರುವಾಗಿದೆ. ಟ್ವಿಟರ್‌ನಲ್ಲಿ ಬೆಂಗಳೂರು ಮಳೆ (#BangaloreRains) ಟ್ರೆಂಡ್ ಆಗಿ ದೇಶದ ಗಮನ ಸೆಳೆದಿದೆ!

ಬಸವನಗುಡಿ, ಬಾನಸವಾಡಿ, ಇಂದಿರಾನಗರ, ಚಂದ್ರಾಲೇಔಡ್‌, ರಾಜಾಜಿನಗರ, ಬನಶಂಕರಿ, ವಿದ್ಯಾರಣ್ಯಪುರ, ಯಲಹಂಕ,...ಹೀಗೆ ಬೆಂಗಳೂರಿನ ಬಹುತೇಕ ಎಲ್ಲ ವಲಯಗಳನ್ನೂಮಳೆರಾಯ ಸ್ಪರ್ಶಿಸಿದ್ದಾನೆ. ಕೆಲವು ಕಡೆ ಮಳೆಗಿಂತಲೂ ಗುಡುಗಿನದ್ದೇ ಜೋರು. ಸಿಡಿಲು ಹೆಚ್ಚುತ್ತಿದ್ದಂತೆ ಇನ್ನೂ ಕೆಲವು ಕಡೆ ವಿದ್ಯುತ್‌ ಕಡಿತಗೊಂಡಿದ್ದೂ ವರದಿಯಾಗಿದೆ.

ಬೆಂಗಳೂರು ಮಳೆ ಒಬ್ಬೊಬ್ಬರಿಗೂ ಭಿನ್ನ ಅನುಭವವನ್ನು ನೀಡಿದೆ. ಟ್ವಿಟರ್‌ ಪೋಸ್ಟ್‌ಗಳೇ ಇದಕ್ಕೆ ಸಾಕ್ಷಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT