ಬೆಂಗಳೂರು: ‘ಗಿರಿನಗರ ಠಾಣೆ ವ್ಯಾಪ್ತಿಯಲ್ಲಿ ವೆಂಕಟೇಶ್ (40) ಎಂಬುವರನ್ನು ಕೊಲೆ ಮಾಡಲಾಗಿದ್ದು, ಆರೋಪಿ ಸಿದ್ದರಾಜುನನ್ನು (42) ಬಂಧಿಸಲಾಗಿದೆ’ ಎಂದು ಪೊಲೀಸರು ಬಂಧಿಸಿದ್ದಾರೆ.

‘ಆಂಧ್ರಪ್ರದೇಶದ ವೆಂಕಟೇಶ್, ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಟೈಲರ್ ಕೆಲಸ ಮಾಡುತ್ತಿದ್ದರು. ಆರೋಪಿ ಸಿದ್ದರಾಜು, ಬಾರ್ ಆ್ಯಂಡ್ ರೆಸ್ಟೋರೆಂಟ್ ಕೆಲಸಗಾರ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಸಿದ್ದರಾಜು, ಪತ್ನಿ ಜೊತೆ ವಾಸವಿದ್ದ. ದಂಪತಿ ನಡುವೆ ಜಗಳವಿತ್ತು. ಸಿದ್ದರಾಜು ಪತ್ನಿಯನ್ನು ಪರಿಚಯ ಮಾಡಿಕೊಂಡಿದ್ದ ವೆಂಕಟೇಶ್, ಸಲುಗೆ ಬೆಳೆಸಿದ್ದ. ಡಿ. 2ರಂದು ವೆಂಕಟೇಶ್ ಹಾಗೂ ಸಿದ್ದರಾಜು ಪತ್ನಿ ಪರಸ್ಪರ ಮಾತನಾಡುತ್ತ ರಸ್ತೆಯಲ್ಲಿ ನಿಂತಿದ್ದರು. ಅದನ್ನು ಗಮನಿಸಿದ್ದ ಸಿದ್ದರಾಜು ಸ್ಥಳಕ್ಕೆ ಹೋಗಿದ್ದ.’

‘ವೆಂಕಟೇಶ್ ಅವರಿಗೆ ಚಪ್ಪಲಿಯಿಂದ ಹೊಡೆದಿದ್ದ ಸಿದ್ದರಾಜು, ತಳ್ಳಿ ಬೀಳಿಸಿದ್ದ. ತಲೆಗೆ ತೀವ್ರ ಪೆಟ್ಟು ಬಿದ್ದು ಪ್ರಜ್ಞೆ ತಪ್ಪಿದ್ದ ವೆಂಕಟೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.