ಬುಧವಾರ, 22 ಅಕ್ಟೋಬರ್ 2025
×
ADVERTISEMENT
ADVERTISEMENT

ನೀಲಸಂದ್ರ| ಬಜಾರ್‌ ಮುಖ್ಯ ರಸ್ತೆ: 10 ತಿಂಗಳಾದರೂ ಮುಗಿಯದ ಕಾಮಗಾರಿ

ನೀಲಸಂದ್ರದ ಇನ್ಫ್ಯಾಂಟ್‌ ಚರ್ಚ್‌ನಿಂದ ಸಿಎಂಪಿ ಗೇಟ್‌ವರೆಗಿನ ರಸ್ತೆ ಅಭಿವೃದ್ಧಿ
Published : 21 ಅಕ್ಟೋಬರ್ 2025, 23:30 IST
Last Updated : 21 ಅಕ್ಟೋಬರ್ 2025, 23:30 IST
ಫಾಲೋ ಮಾಡಿ
Comments
ನೀಲಸಂದ್ರ ಇನ್ಫ್ಯಾಂಟ್‌ ಚರ್ಚ್‌ನ ಬಜಾರ್‌ ರಸ್ತೆಯ ಮಧ್ಯದಲ್ಲಿ ಮ್ಯಾನ್‌ಹೋಲ್‌ ಇರುವುದರಿಂದ ವಾಹನ ಸಂಚಾರಕ್ಕೆ ತೊಡಕಾಗಿದೆ
ಪ್ರಜಾವಾಣಿ ಚಿತ್ರ: ಕಿಶೋರ್‌ ಕುಮಾರ್‌ ಬೋಳಾರ್
ನೀಲಸಂದ್ರ ಇನ್ಫ್ಯಾಂಟ್‌ ಚರ್ಚ್‌ನ ಬಜಾರ್‌ ರಸ್ತೆಯ ಮಧ್ಯದಲ್ಲಿ ಮ್ಯಾನ್‌ಹೋಲ್‌ ಇರುವುದರಿಂದ ವಾಹನ ಸಂಚಾರಕ್ಕೆ ತೊಡಕಾಗಿದೆ ಪ್ರಜಾವಾಣಿ ಚಿತ್ರ: ಕಿಶೋರ್‌ ಕುಮಾರ್‌ ಬೋಳಾರ್
ನೀಲಸಂದ್ರ ಇನ್ಫ್ಯಾಂಟ್‌ ಚರ್ಚ್‌ನ ಬಜಾರ್‌ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ
ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ನೀಲಸಂದ್ರ ಇನ್ಫ್ಯಾಂಟ್‌ ಚರ್ಚ್‌ನ ಬಜಾರ್‌ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ನಿತ್ಯ ದೂಳಿನ ಸಮಸ್ಯೆ ಹೆಚ್ಚಾಗುತ್ತಿದೆ. ಇದರಿಂದ ಇಲ್ಲಿನ ವ್ಯಾಪಾರಿಗಳು ನಾನಾ ರೋಗಗಳಿಂದ ಬಳಲುತ್ತಿದ್ದಾರೆ. ಗ್ರಾಹಕರು ಬಾರದೇ ಅಂಗಡಿಯ ಬಾಡಿಗೆ ಕಟ್ಟುವುದಕ್ಕೂ ಸಮಸ್ಯೆ ಆಗಿದೆ
ಬಾಷಾ, ಬಟ್ಟೆ ಅಂಗಡಿ ಮಾಲೀಕ 
ಬಾಷಾ
ಬಾಷಾ
ಹತ್ತು ತಿಂಗಳಿಂದ ಕಾಮಗಾರಿ ನಡೆಯುತ್ತಿದೆ. ಇದರಿಂದ ಈ ರಸ್ತೆಯಲ್ಲಿ ಬಿಎಂಟಿಸಿ ಬಸ್‌ಗಳು ಬರುತ್ತಿಲ್ಲ. ಇದರಿಂದ ಗ್ರಾಹಕರ ಸಂಖ್ಯೆ ಕಡಿಮೆ ಆಗಿದ್ದು, ವ್ಯಾಪಾರ–ವಹಿವಾಟಿಗೆ ಹೊಡೆತ ಬಿದ್ದಿದೆ. ಪ್ರತಿ ತಿಂಗಳು ₹40 ಸಾವಿರ ಬಾಡಿಗೆ ಕಟ್ಟಬೇಕಿದೆ. ಅಭಿವೃದ್ಧಿ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುವುದು ಎಷ್ಟು ಸರಿ? 
ಮಹಮ್ಮದ್ ಮಾಜ್, ಮಾಂಸದ ಅಂಗಡಿಯ ಮಾಲೀಕ 
ಮಹಮ್ಮದ್ ಮಾಜ್
ಮಹಮ್ಮದ್ ಮಾಜ್
ಮಳೆ ಬಂದರೆ ಇಡೀ ರಸ್ತೆ ಕೆಸರುಮಯವಾಗುತ್ತಿದೆ. ಇಂತಹ ದುಃಸ್ಥಿತಿಯಲ್ಲಿ ಸಾರ್ವಜನಿಕರು ಹೇಗೆ ಓಡಾಡಬೇಕು. ನೀಲಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಬೇಕು. ಈ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ
ಕುಮಾರ್, ಸ್ಥಳೀಯರು
ಕುಮಾರ್
ಕುಮಾರ್
ಬಜಾರ್‌ ರಸ್ತೆಯಲ್ಲಿ ಸಂಚರಿಸುವ ಆಟೊಗಳನ್ನು 15 ದಿನಗಳಿಗೊಮ್ಮೆ ರಿಪೇರಿ ಮಾಡಿಸಬೇಕು. ರಸ್ತೆಯನ್ನು ಅಗೆದು ಹಾಕಿರುವುದರಿಂದ ವಾಹನ ಸಂಚಾರವೇ ದುಸ್ತರವಾಗಿದೆ. ಬಜಾರ್‌ ರಸ್ತೆಗೆ ಸುತ್ತಿ ಬಳಸಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿ ಕಾಮಗಾರಿಗೆ ವೇಗ ನೀಡಬೇಕು
ಸತೀಶ್, ಆಟೊ ಚಾಲಕ
ಸತೀಶ್
ಸತೀಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT