ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕರೂಪ ಪಠ್ಯಕ್ರಮ ಜಾರಿ ಕೈಬಿಡಿ: ಬರಗೂರು

Last Updated 3 ಜೂನ್ 2020, 22:28 IST
ಅಕ್ಷರ ಗಾತ್ರ

ಬೆಂಗಳೂರು: ‘ಶೈಕ್ಷಣಿಕ ಸ್ವಾಯತ್ತತೆ, ವೈವಿಧ್ಯತೆ ಮತ್ತು ವಿಕೇಂದ್ರೀಕರಣದ ತಾತ್ವಿಕತೆಯ ಆಧಾರದಲ್ಲೇ ವಿವಿಧ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ಏಕರೂಪ ಪಠ್ಯಕ್ರಮ ರೂಪಿಸಿದರೆ ಈ ಪ್ರಮುಖ ಅಂಶಗಳನ್ನೇ ಮೂಲೆಗೆ ತಳ್ಳಿದಂತಾಗುತ್ತದೆ’ ಎಂದು ಸಾಹಿತಿಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಉನ್ನತ ಶಿಕ್ಷಣ ಸಚಿವರಿಗೆ ಐದು ದಿನದಲ್ಲಿ ಎರಡನೇ ಪತ್ರ ಬರೆದಿರುವ ಅವರು, ‘ಏಕರೂಪದ ಪಠ್ಯಕ್ರಮದಿಂದ ಭಾಷೆ, ಸಾಹಿತ್ಯ ಸಹಿತ ಎಲ್ಲ ಮಾನವಿಕ ಪಠ್ಯಗಳು ಪ್ರಾದೇಶಿಕ ವಿಷಯ ಪ್ರಾತಿನಿಧ್ಯದ ಅವಕಾಶದಿಂದ ವಂಚಿತವಾಗುವ ಅಪಾಯವಿದೆ‌’ ಎಂದಿದ್ದಾರೆ.

‘ತುಮಕೂರು ವಿಶ್ವವಿದ್ಯಾಲಯವು ಸಾಹಿತ್ಯ ಪಠ್ಯಕ್ರಮ ರೂಪಿಸಲು ಸೂಚಿಸಿರುವ ಪತ್ರದಲ್ಲಿ ಕೌಶಲಾಭಿವೃದ್ಧಿ, ವೃತ್ತಿಪರತೆ, ಉದ್ಯೋಗಾಧಾರಿತ ವಿಷಯಗಳನ್ನು ಸೇರಿಸಬೇಕೆಂದು ಹೇಳಲಾಗಿದೆ. ಸಾಹಿತ್ಯ ಪಠ್ಯಕ್ರಮಕ್ಕೆ ಈ ವಿಷಯಗಳನ್ನು ಹೇಗೆ ಸೇರಿಸಲು ಸಾಧ್ಯ?’ ಎಂದು ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT